2018 ಜುಲೈ 11 ರ “ವಿಶ್ವ ಜನಸಂಖ್ಯಾ ದಿನ” ಆಚರಣೆ

0
306

ಪ್ರತಿ ವರ್ಷದ ಜು.11 ಅನ್ನು ‘ವಿಶ್ವ ಜನಸಂಖ್ಯಾ ದಿನ’ವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1989ರಿಂದ ಈ ಆಚರಣೆಗೆ ಚಾಲನೆ ನೀಡಿದೆ. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ.

ಪ್ರತಿ ವರ್ಷದ ಜು.11 ಅನ್ನು ‘ವಿಶ್ವ ಜನಸಂಖ್ಯಾ ದಿನ’ವೆಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯು 1989ರಿಂದ ಈ ಆಚರಣೆಗೆ ಚಾಲನೆ ನೀಡಿದೆ. ಜನಸಂಖ್ಯಾ ಸ್ಫೋಟದಿಂದಾಗುವ ಅಪಾಯಗಳು, ಕುಟುಂಬ ಯೋಜನೆಗೆ ಆದ್ಯತೆ, ಲಿಂಗ ಅಸಮಾನತೆ, ಬಡತನ, ಶಿಶು ಮರಣ, ಮಾನವ ಹಕ್ಕುಗಳು ಮತ್ತಿತರ ಸಂಗತಿಗಳಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶ. 
ಈ ವರ್ಷದ ಥೀಮ್‌ : ‘ಕುಟುಂಬ ಯೋಜನೆಯು ಮಾನವ ಹಕ್ಕು’

ವಿಶ್ವದ ಜನಸಂಖ್ಯೆ: 748,50,53,615 

1,000 ಕೋಟಿ: 2055ರ ಹೊತ್ತಿಗೆ ವಿಶ್ವದ ಜನಸಂಖ್ಯೆ 

ಜನಸಂಖ್ಯೆ ಬೆಳವಣಿಗೆ 

1804: 100 ಕೋಟಿ, 
1930: 200 ಕೋಟಿ, 
1960: 300 ಕೋಟಿ, 
1974: 400 ಕೊಟಿ, 
1987: 500 ಕೋಟಿ, 
2017: 700 ಕೋಟಿ. 

ಭಾರತದ ಜನಸಂಖ್ಯೆ: 129,68,34,042 

ಅಧಿಕ ಜನಸಂಖ್ಯೆ ಹೊಂದಿರುವ ಟಾಪ್‌ 10 ದೇಶಗಳು 
1. ಚೀನಾ 138 ಕೋಟಿ 
2. ಭಾರತ 129 ಕೋಟಿ 
3. ಅಮೆರಿಕ 32 ಕೋಟಿ 
4. ಇಂಡೋನೇಷಿಯಾ 26 ಕೋಟಿ 
5. ಬ್ರೆಜಿಲ್‌ 20 ಕೋಟಿ 
6. ಪಾಕಿಸ್ತಾನ 20.7 ಕೋಟಿ 
7. ನೈಜೀರಿಯಾ 19.5 ಕೋಟಿ 
8. ಬಾಂಗ್ಲಾದೇಶ 15.9 ಕೋಟಿ 
9. ರಷ್ಯಾ 14.2 ಕೋಟಿ 
10. ಜಪಾನ್‌ 12.6 ಕೋಟಿ 

ಸಂಪನ್ಮೂಲಗಳ ಮೇಲೆ ಒತ್ತಡ 
ನಿನ್ನೆಗೆ ಹೋಲಿಸಿದರೆ ಇಂದು 2 ಲಕ್ಷ ಜನರು ಜಗತ್ತಿನಲ್ಲಿ ಜಾಸ್ತಿಯಾಗಿದ್ದಾರೆ. ಈ ಲೆಕ್ಕಾಚಾರದಲ್ಲಿಯೇ ಜಗತ್ತಿನ ಜನಸಂಖ್ಯೆ ವೃದ್ಧಿಸುತ್ತಿದೆ. ಈ ಸ್ಫೋಟದಿಂದ ಭಾರತದ ಸಂಪನ್ಮೂಲಗಳ ಮೇಲೆ ಒತ್ತಡ ಸೃಷ್ಟಿ. 
ವಿಶ್ವದ ಆರ್ಥಿಕತೆಯು ಈ ಶತಮಾನದಲ್ಲಿ 26 ಪಟ್ಟು ವೃದ್ಧಿಯಾಗಿದೆ. ಇದರಿಂದಾಗಿ ಭೂಮಿ ಮೇಲಿನ ಸಂಪನ್ಮೂಲಗಳ ಮೇಲೆ ಒತ್ತಡ ಬಿದ್ದಿದೆ. ನಾವು ಈಗಾಗಲೇ ಶೇ.160 ಪಟ್ಟು ಹೆಚ್ಚಿನದಾಗಿಯೇ ಬಳಸಿಕೊಂಡಿದ್ದೇವೆ. 

ಪ್ರತಿ 8 ಸೆಕೆಂಡ್‌ಗೆ ಒಂದು ಮಗು ಜನನ 
ಪ್ರತಿ 12 ಸೆಕೆಂಡ್‌ಗೆ ಒಂದು ಸಾವು 
ವರ್ಷಕ್ಕೆ 73 ಕೋಟಿ ಜನನ 
ವರ್ಷಕ್ಕೆ 30 ಕೋಟಿ ಮರಣ 
ದಿನಕ್ಕೆ 2,81 ಲಕ್ಷ ಮಕ್ಕಳ ಜನನ 
ದಿನಕ್ಕೆ 1.16 ಲಕ್ಷ ಮರಣ 

82.8 ಕೋಟಿ: ಅಪೌಷ್ಟಿಕತೆಯಿಂದ ಬಳಲಿದ ಜನ ಸಂಖ್ಯೆ 
22,440: ಹಸಿವಿನಿಂದ ದಿನಕ್ಕೆ ಸಾಯುವವರು 

ಶೇ.1.12: 2017ರಲ್ಲಿ ಜನಸಂಖ್ಯೆ ವೃದ್ಧಿ 
ಈಗ ಜನಸಂಖ್ಯೆ ಎಷ್ಟಿದೆಯೋ ಅದರ ಅರ್ಧದಷ್ಟು ಜನಸಂಖ್ಯೆ 1970ರಲ್ಲಿ ಇತ್ತು. ಇದೇ ರೀತಿ ಈಗಿನ ಜನಸಂಖ್ಯೆಯ ದ್ವಿಗುಣವಾಗಲು 200 ವರ್ಷಗಳು ಬೇಕು ಅನ್ನುವುದು ಒಂದು ಅಂದಾಜು. 

ಇಂದು ಏನು ಮಾಡಬಹುದು? 
ಕುಟುಂಬ ಯೋಜನೆಗಳ ಪ್ರಚಾರ, 
ಯುವಕ, ಯುವತಿಯರ ಸಬಲೀಕರಣದ ದಿನವಾಗಿ ಆಚರಿಸಬಹುದು, 
ಬೇಡದ ಗರ್ಭಧಾರಣೆ ತಡೆಯ ಶಿಕ್ಷಣ ನೀಡಬೇಕು, 
ಸಮಾಜದಲ್ಲಿ ಲಿಂಗ ಅಸಮಾನತೆ ನಿವಾರಣೆಗೆ ಪೂರಕವಾಗಿ ಶಿಕ್ಷಣ ಒದಗಿಸುವುದು. 

ಜನಸಂಖ್ಯೆ ಸಮಸ್ಯೆ 
ಜನಸಂಖ್ಯೆ ಹೆಚ್ಚಳದಿಂದ ಆಹಾರ, ನಿರುದ್ಯೋಗ, ಶಿಕ್ಷಣದ ಸಮಸ್ಯೆ, 
ವಲಸೆ, ಅನಾರೋಗ್ಯ, ಅಪೌಷ್ಟಿಕತೆ, ತ್ಯಾಜ್ಯ ನಿರ್ವಹಣೆ, ಜಲ, ನೆಲ ಮತ್ತಿತರ ಸಮಸ್ಯೆಗಳು. 

ಜನಸಂಖ್ಯೆಯ ಲಾಭ 
ಉದ್ಯೋಗಿಗಳ ಕೊರತೆ ಇರುವುದಿಲ್ಲ, 
ಜನರು ಸಹ ದೇಶದ ಸಂಪನ್ಮೂಲವೇ ಆಗಿದ್ದು, ಅಭಿವೃದ್ಧಿಗೆ ಕೊಡುಗೆ. ಹೊಸ ಆಲೋಚನೆ, ಕೆಲಸದ ಹಂಚಿಕೆಗೆ ಅನುಕೂಲ. 

2050ಕ್ಕೆ ಚೀನಾದ ಜನಸಂಖ್ಯೆ ಭಾರತದ ಶೇ.65ಕ್ಕೆ ಇಳಿಕೆ! 
ಚೀನಾದ ಜನಸಂಖ್ಯಾ ತಜ್ಞರ ಪ್ರಕಾರ 2050ರ ವೇಳೆಗೆ ಚೀನಾದ ಜನಸಂಖ್ಯೆಯು ಭಾರತದ ಜನಸಂಖ್ಯೆಯ ಶೇ.65ಕ್ಕೆ ಇಳಿಯಲಿದೆ! ಹೀಗಾಗಿ ಚೀನಾ ತನ್ನ ಕುಟುಂಬ ಯೋಜನೆ ನೀತಿಯನ್ನು ಅಂತ್ಯಗೊಳಿಸಬೇಕು ಎನ್ನುವ ಒತ್ತಾಯ ಅಲ್ಲಿ ಉಂಟಾಗಿದೆ. ಚೀನಾದಲ್ಲಿ 1979ರಲ್ಲಿ ಒಂದು ಕುಟುಂಬಕ್ಕೆ ಒಂದು ಮಗು ನೀತಿ ಜಾರಿಯಾಗಿತ್ತು. 
ನಂತರ 2016ರಲ್ಲಿ ಒಂದು ಕುಟುಂಬಕ್ಕೆ 2 ಮಗು ಎಂದು ಬದಲಿಸಿತ್ತು. ಆದರೆ ಈಗಿನ ಪರಿಸ್ಥಿತಿಯೇ ಮುಂದುವರಿದರೆ, 2050ಕ್ಕೆ ಭಾರತದ ಜನಸಂಖ್ಯೆಯ ಶೇ.65ಕ್ಕೆ ಹಾಗೂ 2,100ಕ್ಕೆ ಶೇ.32ಕ್ಕೆ ತಗ್ಗಲಿದೆ. ಇದರಿಂದ ನಾನಾ ಸಮಸ್ಯೆಯಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಮೊದಲು ಕುಟುಂಬ ಯೋಜನೆಯ ನೀತಿ ಅಂತ್ಯವಾಗಬೇಕು ಎನ್ನುತ್ತಾರೆ ಸಂಶೋಧಕರು. 

ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಯುವಜನತೆ ಇದೆ. ಯುವಜನತೆಯನ್ನು ಕೇವಲ ಕಾರ್ಮಿಕ ಬಲದ ದೃಷ್ಟಿಯಿಂದ ನೋಡಬಾರದು. ಅವರಿಗೆ ಸಮರ್ಪಕವಾದ ಉದ್ಯೋಗಾವಕಾಶಗಳನ್ನು ಕಲ್ಪಿಸಿದರೆ ದೇಶದ ಆರ್ಥಿಕ ಬೆಳವಣಿಗೆಗೆ ಅಮೂಲ್ಯವಾದ ಕೊಡುಗೆ ಲಭಿಸಲಿದೆ. ದೇಶದ ಜನಸಂಖ್ಯಾ ನೀತಿಯು ವಿದೇಶಿ ನೀತಿಯನ್ನು ಅನುಕರಿಸಿದ್ದು, ವಿಶ್ವಸಂಸ್ಥೆಯ ಅಂಗ ಸಂಸ್ಥೆಯಾದ ಯುಎನ್‌ಎಫ್‌ಪಿಎ ಇದನ್ನು ರೂಪಿಸುತ್ತಿದೆ. ಆದರೆ ಭಾರತದಲ್ಲಿ ಯುವಜನರಿಗೆ ಉತ್ತಮ ಉದ್ಯೋಗಾವಕಾಶ ಒದಗಿಸುವ ಜನಸಂಖ್ಯಾ ನೀತಿಯ ಅಗತ್ಯ ಇದೆ. ಭಾರತಕ್ಕೆ ಜನಸಂಖ್ಯೆ ಈಗ ಅತ್ಯಂತ ಅನುಕೂಲಕರವಾಗಿ ಪರಿಣಮಿಸಬಲ್ಲುದು. 
-ಪ್ರೊ.ಆರ್‌.ಎಸ್‌.ದೇಶಪಾಂಡೆ.