2018 ಏಷ್ಯನ್ ಪ್ಯಾರಾ ಕ್ರೀಡಾಕೂಟ :ಕರ್ನಾಟಕದ ಚೆಸ್ ಆಟಗಾರ “ಕಿಶನ್ ಗಂಗೊಳ್ಳಿ”​ಗೆ ಚಿನ್ನ

0
207

ಸಾಧನೆಗೆ ದೈಹಿಕ ನ್ಯೂನತೆಗಳು ಅಡ್ಡಿಯಲ್ಲ ಎಂಬುದನ್ನು ನಿರೂಪಿಸಿದ ಕರ್ನಾಟಕದ ಕಿಶನ್ ಗಂಗೊಳ್ಳಿ, ಪ್ಯಾರಾ ಏಷ್ಯಾಡ್ ಕ್ರೀಡಾಕೂಟದ ಚೆಸ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ.

ಜಕಾರ್ತ: ಸಾಧನೆಗೆ ದೈಹಿಕ ನ್ಯೂನತೆಗಳು ಅಡ್ಡಿಯಲ್ಲ ಎಂಬುದನ್ನು ನಿರೂಪಿಸಿದ ಕರ್ನಾಟಕದ ಕಿಶನ್ ಗಂಗೊಳ್ಳಿ, ಪ್ಯಾರಾ ಏಷ್ಯಾಡ್ ಕ್ರೀಡಾಕೂಟದ ಚೆಸ್ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿದ್ದಾರೆ. ತಂಡ ವಿಭಾಗದಲ್ಲೂ ಬೆಳ್ಳಿ ಗೆದ್ದ ಕಿಶನ್, ಡಬಲ್ ಪದಕ ಸಾಧನೆ ಮಾಡಿದರು.

ಚೆಸ್ ಆಟಗಾರ್ತಿ ಜೆನಿತಾ ಅಂಟೊ ಮತ್ತು ಷಟ್ಲರ್ ಪರ್ವರ್ ಪಾರುಲ್, ಅಥ್ಲೆಟಿಕ್ಸ್​ನಲ್ಲಿ ನೀರಜ್ ಯಾಧವ್, ಅಮಿತ್ ಕುಮಾರ್ ಕೂಡ ಸ್ವರ್ಣ ಪದಕ ಗೆದ್ದರು. ಅಲ್ಲದೆ ಅಥ್ಲೆಟಿಕ್ಸ್​ನಲ್ಲಿ ತಲಾ 2 ಬೆಳ್ಳಿ ಮತ್ತು ಕಂಚು, ಸೈಕ್ಲಿಂಗ್​ನಲ್ಲಿ 1 ಕಂಚು, ಸ್ವಿಮ್ಮಿಂಗ್​ನಲ್ಲಿ ಬೆಳ್ಳಿ, ಬ್ಯಾಡ್ಮಿಂಟನ್​ನಲ್ಲಿ 2 ಕಂಚು ಸಹಿತ ಕೂಟದ 7ನೇ ದಿನವಾದ ಅಕ್ಟೋಬರ್ 12 ರ   ಶುಕ್ರವಾರ ಭಾರತ ಒಟ್ಟು 14 ಪದಕಗಳ ಬೇಟೆಯಾಡಿದೆ.

 ಕುಂದಾಪುರದ 26 ವರ್ಷದ ಕಿಶನ್ ಅಂಧರ ಚೆಸ್ ನ ಬಿ3 ವಿಭಾಗದಲ್ಲಿ ಗಮನಾರ್ಹ ನಿರ್ವಹಣೆಯೊಂದಿಗೆ ಸ್ವರ್ಣ ಸಾಧನೆ ಮಾಡಿದರು. ಶಿವಮೊಗ್ಗದಲ್ಲಿ ನೆಲೆಸಿರುವ ಕಿಶನ್ ಹುಟ್ಟಿನಿಂದಲೆ ಶೇ.75ರಷ್ಟು ಅಂಧರಾಗಿದ್ದರೂ, ಕುವೆಂಪು ವಿವಿಯ ಅರ್ಥಶಾಸ್ತ್ರ ಎಂಎ ವಿಭಾಗದಲ್ಲಿ 2ನೇ ಸ್ಥಾನ ಪಡೆದ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದಾರೆ. ಅವರು ಒಳಗೊಂಡ ಭಾರತ ತಂಡ ಬಿ2/ಬಿ3 ಚೆಸ್​ನಲ್ಲಿ ಬೆಳ್ಳಿ ಜಯಿಸಿತು. ವೈಯಕ್ತಿಕ ಸ್ಯಾಂಡರ್ಡ್ ಪಿ1 ಚೆಸ್​ನಲ್ಲಿ ಬೆಳ್ಳಿ ಮತ್ತು ತಂಡ ವಿಭಾಗದಲ್ಲಿ ಕಂಚು ಪದಕ ಗೆದ್ದಿದ್ದ ಜೆನಿತಾ ಅಂಟೊ, ರ್ಯಾಪಿಡ್ ಚೆಸ್​ನಲ್ಲಿ ಚಿನ್ನ ಜಯಿಸಿದರು. ಭಾರತ ಮಹಿಳಾ ತಂಡವೂ ರ್ಯಾಪಿಡ್ ಚೆಸ್​ನಲ್ಲಿ ಬೆಳ್ಳಿ ಜಯಿಸಿತು.