ಸಾಹಿತಿ ಕಾಮರೂಪಿ (ಎಂ.ಎಸ್. ಪ್ರಭಾಕರ್), ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್, ಪತ್ರಕರ್ತ ಜಿ.ಎನ್. ರಂಗನಾಥರಾವ್, ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ, ಜಾನಪದ ಕಲಾವಿದ ಗುರುವ ಕೊರಗ, ಒಲಿಂಪಿಯನ್ ಕ್ರೀಡಾಪಟುಕೆನೆತ್ ಪೊವೆಲ್ಸೇರಿದಂತೆ 63 ಸಾಧಕರಿಗೆ 2018ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ಬೆಂಗಳೂರು: ಸಾಹಿತಿ ಕಾಮರೂಪಿ (ಎಂ.ಎಸ್. ಪ್ರಭಾಕರ್), ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್, ಪತ್ರಕರ್ತ ಜಿ.ಎನ್. ರಂಗನಾಥರಾವ್, ಪರಿಸರ ಪ್ರೇಮಿ ಕಲ್ಮನೆ ಕಾಮೇಗೌಡ, ಜಾನಪದ ಕಲಾವಿದ ಗುರುವ ಕೊರಗ, ಒಲಿಂಪಿಯನ್ ಕ್ರೀಡಾಪಟು ಕೆನೆತ್ ಪೊವೆಲ್ ಸೇರಿದಂತೆ 63 ಸಾಧಕರಿಗೆ 2018ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಸಂದಿದೆ.
ನವೆಂಬರ್ 29 ರ ಗುರುವಾರ ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು 1 ಲಕ್ಷ, 20 ಗ್ರಾಂ ಚಿನ್ನ ಹಾಗೂ ಫಲಕ ಒಳಗೊಂಡಿದೆ. ಈ ಬಾರಿಯ ವಿಶೇಷವೆಂದರೆ ಪ್ರಶಸ್ತಿ ಪಡೆದ ಗೋಪಾಲರಾವ್ ಹಾಗೂ ಗುರುವ ಇಬ್ಬರೂ ನೂರು ವರ್ಷ ಹಿರೀಕರು. ಕರಾವಳಿ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸಾಧಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ತಳ ಸಮುದಾಯದ ಅನೇಕರನ್ನು ಸರ್ಕಾರ ಗುರುತಿಸಿದೆ. ನವೆಂಬರ್ 1ರ ರಾಜ್ಯೋತ್ಸವದ ದಿನ ಪ್ರಶಸ್ತಿ ಪ್ರದಾನ ಮಾಡುವುದು ರೂಢಿ. ವಿಧಾನಸಭಾ ಉಪ ಚುನಾವಣೆ ನೀತಿ ಸಂಹಿತೆಯ ಕಾರಣಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ಮುಂದೂಡಲಾಗಿತ್ತು. ನ.8ರಂದು ನೀತಿ ಸಂಹಿತೆ ಮುಗಿಯಲಿದ್ದು, ಅದೇ ದಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿತ್ತು.
ಪ್ರಶಸ್ತಿ ಆಯ್ಕೆಗಾಗಿ ರಚಿಸಲಾಗಿದ್ದ ಸಮಿತಿಯು 126 ಸಾಧಕರ ಪಟ್ಟಿಯನ್ನು ಮುಖ್ಯಮಂತ್ರಿ ಅವರಿಗೆ ಸಲ್ಲಿಸಿತ್ತು. ಈ ಪಟ್ಟಿಗೆ ಕೆಲವು ಅಕಾಡೆಮಿ ಅಧ್ಯಕ್ಷರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೆಲವು ಹೆಸರುಗಳನ್ನು ತೆಗೆದು ಹಾಕಿ 63ಕ್ಕೆ ಸೀಮಿತಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.
2018ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯ ಪುರಸ್ಕೃತರ ಪಟ್ಟಿ
ಸಾಹಿತ್ಯ
01) ಎಂ.ಎಸ್.ಪ್ರಭಾಕರ – ಕೋಲಾರ
02)ಹಸನ್ ನಯೀಂ ಸುರಕೋಡ – ಬೆಳಗಾವಿ
03) ಚ. ಸರ್ವಮಂಗಳ – ಮೈಸೂರು
04) ಚಂದ್ರಶೇಖರ್ ತಾಳ್ಯ – ಚಿತ್ರದುರ್ಗ
ರಂಗಭೂಮಿ
05) ಎಸ್.ಎನ್.ರಂಗಸ್ವಾಮಿ – ದಾವಣಗೇರಿ
06) ಪುಟ್ಟಸ್ವಾಮಿ – ರಾಮನಗರ
07) ಪಂಪಣ್ಣ ಕೋಗಳಿ – ಬಳ್ಳಾರಿ
ಸಂಗೀತ
08) ಅಣ್ಣು ದೇವಾಡಿಗ – ದಕ್ಷಿಣ ಕನ್ನಡ
ನೃತ್ಯ
09)ಎಂ.ಆರ್.ಕೃಷ್ಣಮೂರ್ತಿ – ಬೆಂಗಳೂರು
ಜಾನಪದ
10) ಗುರವ ಕೊರಗ – ಉಡುಪಿ
11) ಗಂಗಹುಚ್ಚಮ್ಮ – ಚಿಕ್ಕಮಗಳೂರು
12) ಚನ್ನಮಲ್ಲೇಗೌಡ – ಚಾಮರಾಜನಗರ
13) ಶರಣಪ್ಪ ಬೂತೇರ್ – ಬೀದರ್
14) ಶಂಕ್ರಮ್ಮ ಮಹಾದೇವಪ್ಪ – ಕಲಬುರ್ಗಿ
15) ಬಸವರಾಜ ಅಲಗೋಡ -ಕಲಬುರ್ಗಿ
16) ಚೂಡಾಮಣಿ ರಾಮಚಂದ್ರ – ಶಿವಮೊಗ್ಗ
ಶಿಲ್ಪಕಲೆ
17) ಯಮನಪ್ಪ ಚಿತ್ರಗಾರ – ಗದಗ
18) ಬಸಣ್ಣ ಕಾಳಪ್ಪ ಕಂಚಗಾರ – ಯಾದಗಿರಿ
ಚಿತ್ರಕಲೆ
19) ಬಸವರಾಜ ರೇವಣಸಿದ್ದಪ್ಪ ಉಪ್ಪಿನ – ಕಲಬುರ್ಗಿ
ಕ್ರೀಡೆ
20) ಕೆನೆತ್ ಪೊವೆಲ್ – ಕೋಲಾರ
21) ವಿನಯ್ ವಿ.ಎಸ್ – ಕೊಡಗು
22) ಚೇತನ್.ಆರ್ – ಹಾಸನ
ಯಕ್ಷಗಾನ
23) ಹಿರಿಯಡ್ಕ ಗೋಪಾಲರಾವ್ – ಉಡುಪಿ
24) ಸೀತಾರಾಮ್ ಕುಮಾರ್ ಕಟೀಲು – ದಕ್ಷಿಣ ಕನ್ನಡ
ಬಯಲಾಟ
25) ಯಲ್ಲವ್ವಾ ದೊಡ್ಡಪ್ಪನವರ – ಬಾಗಲಕೋಟೆ
26) ಭೀಮರಾಯ್ ಬೋರಗಿ – ವಿಜಯಪುರ
ಚಲನಚಿತ್ರ
27) ಭಾರ್ಗವ – ಮೈಸೂರು
28) ಜೈಜಗದೀಶ – ಕೊಡಗು
29) ರಾಜನ್ – ಮೈಸೂರು
30) ದತ್ತುರಾಜ್ – ಬೆಂಗಳೂರು
ಶಿಕ್ಷಣ
31) ಗೀತಾ ರಾಮಾನುಜಂ – ಮೈಸೂರು
32) ಎ.ವಿ.ಎಸ್. ಮೂರ್ತಿ- ಬೆಂಗಳೂರು
33) ಡಾ.ಕೆ.ಪಿ.ಗೋಪಾಲಕೃಷ್ಣ- ಬೆಂಗಳೂರು
34) ಶಿವಾನಂದ ಕೌಜಲಗಿ- ಬೆಳಗಾವಿ
ಎಂಜಿನಿಯರಿಂಗ್
35) ಪ್ರೋ.ಸಿ.ಇ.ಜಿ ಜೆಸ್ಟೋ – ಬೆಂಗಳೂರು
ಸಂಕೀರ್ಣ
36) ಆರ್.ಎಸ್.ರಾಜಾರಾಂ – ದಕ್ಷಿಣ ಕನ್ನಡ
37) ಮೇಜರ್ ಪ್ರದೀಪ್ ಆರ್ಯ – ಬೆಂಗಳೂರು
38) ಸಿ.ಕೆ.ಜೋರಾಪುರ – ಬೆಳಗಾವಿ
39) ನರಸಿಂಹಯ್ಯ- ಬೆಂಗಳೂರು
40) ಡಿ.ಸುರೇಂದ್ರಕುಮಾರ್ – ದಕ್ಷಿಣ ಕನ್ನಡ
41) ಶಾಂತಪ್ಪನವರ್ ಪಿ.ಬಿ – ಕಲಬುರ್ಗಿ
42) ನಮಶಿವಾಯಂ ರೇಗುರಾಜ್
43) ಪಿ.ರಾಮದಾಸ್ – ದಕ್ಷಿಣ ಕನ್ನಡ
44) ಎಂ.ಜೆ.ಬ್ರಹ್ಮಯ್ಯ – ಚಿಕ್ಕಬಳ್ಳಾಪುರ
ಪ್ರತ್ರಿಕೋದ್ಯಮ
45) ಜಿ.ಎಸ್.ರಂಗನಾಥರಾವ್ – ಬೆಂಗಳೂರು
46) ಬಸವರಾಜಸ್ವಾಮಿ
47) ಅಮ್ಮೆಂಬಳ ಆನಂದ
ಸಹಕಾರ
48) ಸಿ.ರಾಮು
ಸಮಾಜಸೇವೆ
49) ಆನಂದ .ಸಿ.ಕುಂದರ್ – ಉಡುಪಿ
50) ರಾಚಪ್ಪ ಹಡಪದ – ಧಾರವಾಡ
51) ಕೃಷ್ಣಕುಮಾರ್ ಪೂಂಜ – ದಕ್ಷಿಣ ಕನ್ನಡ
52)ಮಾರ್ಗರೇಟ್ ಆಳ್ವ – ಉತ್ತರ ಕನ್ನಡ
ಕೃಷಿ
53) ಮಹಾದೇವ ಅಣ್ಣಾರಾವ್ ವಣದೆ – ಕಲಬುರ್ಗಿ
54) ಮೂಕಪ್ಪ ಪೂಜಾರ್ – ಹಾವೇರಿ
ಪರಿಸರ
55) ಕಲ್ಮನೆ ಕಾಮೇಗೌಡ – ಮಂಡ್ಯ
ಸಂಘ ಸಂಸ್ಥೆ
56) ರಂಗದೊರೆ ಸ್ಮಾರಕ ಆಸ್ಪತ್ರೆ
ವೈದ್ಯಕೀಯ
57) ಡಾ.ಜಿ.ವಿ.ನಾಡಗೌಡ – ಬೆಂಗಳೂರು
58) ಡಾ.ಸೀತಾರಾಮ ಭಟ್ – ಬೆಂಗಳೂರು
59) ಪಿ.ಮೋಹನ್ ರಾವ್ – ಬೆಂಗಳೂರು
60) ಡಾ.ಎಂ.ಜಿ.ಗೋಪಾಲ್ – ಬೆಂಗಳೂರು
ನ್ಯಾಯಾಂಗ
61) ಎಚ್.ಎಲ್.ದತ್ತು -ಚಿಕ್ಕಮಗಳೂರು
ಹೊರನಾಡು
62) ಡಾ.ಎ.ಎ.ಶೆಟ್ಟಿ – ಇಂಗ್ಲೆಂಡ್
ಸ್ವಾತಂತ್ರ ಹೋರಾಟಗಾರರು
63) ಬಸವರಾಜ ಬಿಸರಳ್ಳಿ -ಕೊಪ್ಪಳ