ವಿಶ್ವ ನಂ.1 ಆಟಗಾರ ನಾರ್ವೆಯ 27 ವರ್ಷದ ಗ್ರಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ 4ನೇ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಬುಧವಾರ ಲಂಡನ್ನ ಹಾಲ್ಬರ್ನ್ನ ದಿ ಕಾಲೇಜ್ನಲ್ಲಿ ಮುಕ್ತಾಯಗೊಂಡ 2018ರ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಅಮೆರಿಕದ ಚಾಲೆಂಜರ್, 26 ವರ್ಷದ ಫ್ಯಾಬಿಯಾನೊ ಕರೌನರನ್ನು ಸೋಲಿಸಿದರು.
ಲಂಡನ್: ವಿಶ್ವ ನಂ.1 ಆಟಗಾರ ನಾರ್ವೆಯ 27 ವರ್ಷದ ಗ್ರಾಂಡ್ ಮಾಸ್ಟರ್ ಮ್ಯಾಗ್ನಸ್ ಕಾರ್ಲ್ಸನ್ 4ನೇ ಬಾರಿಗೆ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಬುಧವಾರ ಲಂಡನ್ನ ಹಾಲ್ಬರ್ನ್ನ ದಿ ಕಾಲೇಜ್ನಲ್ಲಿ ಮುಕ್ತಾಯಗೊಂಡ 2018ರ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಅಮೆರಿಕದ ಚಾಲೆಂಜರ್, 26 ವರ್ಷದ ಫ್ಯಾಬಿಯಾನೊ ಕರೌನರನ್ನು ಸೋಲಿಸಿದರು.
ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ವಿಶ್ವ ಚೆಸ್ನ ಮುಖಾಮುಖಿಯ 12 ಪಂದ್ಯಗಳೂ ಡ್ರಾದಲ್ಲಿ ಅಂತ್ಯ ಕಂಡಿದ್ದರಿಂದ ಉಭಯ ಆಟಗಾರರು ತಲಾ 6 ಅಂಕ ಸಂಪಾದಿಸಿದ್ದರು. ಇದರಿಂದಾಗಿ ವಿಜೇತರ ನಿರ್ಧಾರ ರ್ಯಾಪಿಡ್ ಚೆಸ್ನ ಟೈಬ್ರೇಕರ್ ಮೂಲಕ ಬುಧವಾರ ನಡೆಯಿತು. ಮೊದಲ ಮೂರು ಪಂದ್ಯಗಳನ್ನೂ ಗೆದ್ದುಕೊಂಡ ಕಾರ್ಲ್ ಸೆನ್, ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್ ಆದರು.
ಅದರೊಂದಿಗೆ ಗರಿಷ್ಠ ಬಾರಿ ವಿಶ್ವ ಚಾಂಪಿಯನ್ ಆದ ಆಟಗಾರರ ಪಟ್ಟಿಯಲ್ಲಿ ಕಾರ್ಲ್ಸನ್ ಜಂಟಿ 3ನೇ ಸ್ಥಾನ ಪಡೆದರು. ವಿಶ್ವನಾಥನ್ ಆನಂದ್ 5 ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ.