2018ನೇ ಸಾಲಿನ ‘ಮ್ಯಾನ್ ಬೂಕರ್‌’ ಪ್ರಶಸ್ತಿಗೆ ಲೇಖಕಿ “ಅನಾ ಬರ್ನ್ಸ್‌” ಆಯ್ಕೆ

0
553

ಲೇಖಕಿ ಅನಾ ಬರ್ನ್ಸ್‌ (56) ಅವರು 2018ನೇ ಸಾಲಿನ ‘ಮ್ಯಾನ್ ಬೂಕರ್‌’ಗೆ ಪಾತ್ರರಾಗಿದ್ದು, ಈ ‍ಪ್ರತಿಷ್ಠಿತ ಪ್ರಶಸ್ತಿ ಪಡೆದ ಉತ್ತರ ಐರ್ಲೆಂಡ್‌ನ ಮೊದಲ ಸಾಹಿತಿಯಾಗಿದ್ದಾರೆ.

ಲಂಡನ್ (ಪಿಟಿಐ): ಲೇಖಕಿ ಅನಾ ಬರ್ನ್ಸ್‌ (56) ಅವರು 2018ನೇ ಸಾಲಿನ ‘ಮ್ಯಾನ್ ಬೂಕರ್‌’ಗೆ ಪಾತ್ರರಾಗಿದ್ದು, ಈ ‍ಪ್ರತಿಷ್ಠಿತ ಪ್ರಶಸ್ತಿ ಪಡೆದ ಉತ್ತರ ಐರ್ಲೆಂಡ್‌ನ ಮೊದಲ ಸಾಹಿತಿಯಾಗಿದ್ದಾರೆ. 

ಉತ್ತರ ಐರ್ಲೆಂಡ್‌ನ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ವಿವಾಹಿತನೊಂದಿಗೆ ಹೊಂದಿದ ಬಾಂಧವ್ಯ ಕುರಿತ ಕಥೆಯ ‘ಮಿಲ್ಕ್‌ಮ್ಯಾನ್‌’ ಕಾದಂಬರಿಗಾಗಿ ಅವರಿಗೆ ಪ್ರಶಸ್ತಿ ನೀಡಲಾಗಿದ್ದು, ಇದರ ಮೊತ್ತ 50.85 ಲಕ್ಷ.

ಪ್ರಶಸ್ತಿಯ 49 ವರ್ಷಗಳ ಇತಿಹಾಸದಲ್ಲಿ ಬೂಕರ್ ಪಡೆದ 17ನೇ ಮಹಿಳೆ ಇವರಾಗಿದ್ದಾರೆ. ಇದು ಬೂಕರ್ ಸ್ಥಾಪನೆಯಾಗಿ 50ನೇ ವರ್ಷವಾಗಿದೆ. 

‘ನಾವ್ಯಾರೂ ಈ ಮೊದಲು ಇಂತಹ ಕಾದಂಬರಿ ಓದಿರಲಿಲ್ಲ. ಅವರ ವಿಶಿಷ್ಟವಾದ ಗದ್ಯಶೈಲಿ ಸಾಂಪ್ರದಾಯಿಕ ಯೋಚನೆಗೆ ಸವಾಲೊಡ್ಡುತ್ತದೆ ಹಾಗೂ ಆಶ್ಚರ್ಯ ಉಂಟುಮಾಡುತ್ತದೆ’ ಎಂದು ಆಯ್ಕೆ ಸಮಿತಿ ನೇತೃತ್ವ ವಹಿಸಿದ್ದ ಕ್ವಾಮೆ ಆ್ಯಂಟನಿ ತಿಳಿಸಿದ್ದಾರೆ.