2017-18ರ ಸಾಲಿನ ಜಿಡಿಪಿ ಶೇ.7.2ಕ್ಕೆ ಪರಿಷ್ಕರಣೆ : ಕೇಂದ್ರ ಸರ್ಕಾರ

0
584

ಸರಕಾರ 2017-18ರ ಸಾಲಿನ ಆರ್ಥಿಕ ಬೆಳವಣಿಗೆಯ ದರವನ್ನು (ಜಿಡಿಪಿ) ಶೇ.6.7ರಿಂದ ಶೇ.7.2ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಿದೆ.

ಹೊಸದಿಲ್ಲಿ : ಸರಕಾರ 2017-18ರ ಸಾಲಿನ ಆರ್ಥಿಕ ಬೆಳವಣಿಗೆಯ ದರವನ್ನು (ಜಿಡಿಪಿ) ಶೇ.6.7ರಿಂದ ಶೇ.7.2ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಿದೆ. 

ಈ ಹಿಂದೆ ಶೇ.6.7ಕ್ಕೆ ಅಂದಾಜಿಸಲಾಗಿತ್ತು. 2016-17ರ ಜಿಡಿಪಿ 121 ಲಕ್ಷ ಕೋಟಿ ರೂ.ಗಳಾಗಿದ್ದರೆ, 2017-18ರ ಜಿಡಿಪಿ 131 ಲಕ್ಷ ಕೋಟಿ ರೂ.ಗಳಾಗಿದೆ ಎಂದು ಇದರೊಂದಿಗೆ ಶೇ.7.2ರ ಬೆಳವಣಿಗೆ ದಾಖಲಾಗಿದೆ ಎಂದು ಅಂಕಿ ಅಂಶಗಳ ಸಂಸ್ಥೆ ಸಿಎಸ್‌ಒ ತಿಳಿಸಿದೆ. 

ಪ್ರಸಕ್ತ ಸಾಲಿಗೆ ಶೇ.7.2ರ ಜಿಡಿಪಿ ದರವನ್ನು ಸಿಎಸ್‌ಒ ಅಂದಾಜಿಸಿದೆ. ಇದು ಕಳೆದ 4 ವರ್ಷಗಳಲ್ಲಿ ಕನಿಷ್ಠ ಪ್ರಮಾಣದ್ದಾಗಿದೆ. ಈ ಹಿಂದೆ 2013-14ರಲ್ಲಿ ಶೇ.6.4ರ ಜಿಡಿಪಿ ದಾಖಲಾಗಿತ್ತು. 2017-18ರಲ್ಲಿ ದೇಶದ ತಲಾ ಆದಾಯ 1,14,958 ರೂ.ಗಳೆಂದು ತಿಳಿಸಿದೆ.