2017ರಲ್ಲಿ ಅತೀ ಹೆಚ್ಚು ತಾಪಮಾನ: ವಿಶ್ವಸಂಸ್ಥೆ ಎಚ್ಚರಿಕೆ

0
24

ಅಗ್ರ 3 ಅಧಿಕ ತಾಪಮಾನ ವರ್ಷಗಳಲ್ಲಿ 2017 ನಂ.1 ಸ್ಥಾನದಲ್ಲಿರಲ್ಲಿದೆ ಎಂದು ವಿಶ್ವಸಂಸ್ಥೆಯ ಹವಾಮಾನ ವಿಭಾಗ ಹೇಳಿದೆ. ಐದು ವರ್ಷಕ್ಕೊಮ್ಮೆ ಪೆಸಿಫಿಕ್ ಸಮುದ್ರದಿಂದ ಶಾಖ ಹೊರಸೂಸುವ ಎಲ್ ನಿನೊ ಕ್ರಿಯೆ ರಹಿತವಾಗಿ ಈ ಅತಿಯಾದ ಉಷ್ಣದ ವಾತಾವರಣ ನಿರ್ಮಾಣವಾಗಲಿದೆ ಎಂದಿದೆ.

2015, 2016 ನಂತರ ಅತೀ ಹೆಚ್ಚು ಅಸಾಮಾನ್ಯ ವಾತಾವರಣ ಇದೇ ವರ್ಷ ದಾಖಲಾಗುತ್ತಿದೆ. ಇದು ಮಾನವ ನಿರ್ಮಿಕ ಹವಾಮಾನ ಬದಲಾವಣೆ. ಅಟ್ಲಾಂಟಿಕ್, ಕೆರ್ರಿಬಿಯನ್ ಸಾಗರದಲ್ಲಿ ಚಂಡಮಾರುತಗಳು ಏಳಲಿವೆ. ಪಾಕಿಸ್ತಾನ, ಇರಾನ್ ಮತ್ತು ಒಮನ್ ನಲ್ಲಿ 50 ಡಿಗ್ರಿ ಸೆಲ್ಸಿಯಸ್ ಮೀರಿದ ತಾಪಮಾನ ದಾಖಲಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಪೆಟ್ಟೆರಿ ತಾಲಸ್ ಹೇಳಿದ್ದಾರೆ.

ನ.6-17ರವರೆಗೆ ಜರ್ಮನಿಯ ಬಾನ್ ನಲ್ಲಿ 200 ರಾಷ್ಟ್ರಗಳ ಪ್ರತಿನಿಧಿಗಳು ಪ್ಯಾರಿಸ್ ಹವಾಮಾನ ಒಪ್ಪಂದದ ಕುರಿತು ನಡೆಸುವ ಸಭೆಗೆ ಈ ವರದಿ ಮಾರ್ಗಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗಿದೆ.