2016 ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ: ಮುಲ್ಲರ್ ವರದಿ

0
259

2016 ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಆರೋಪದ ಬಗ್ಗೆ ತನಿಖೆ ನಡೆಸಿ ನೀಡಲಾದ ಮುಲ್ಲರ್‌ ವರದಿಯನ್ನು ರಷ್ಯಾ ಮತ್ತೊಮ್ಮೆ ಒಪ್ಪಿಕೊಂಡಿದೆ. ರಷ್ಯಾ ಹಸ್ತಕ್ಷೇಪದ ಬಗ್ಗೆ ಸಾಬೀತು ಮಾಡುವಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮುಲ್ಲರ್ ವರದಿ ತಿಳಿಸಿತ್ತು.

ಮಾಸ್ಕೊ (ಎಎಫ್‌ಪಿ): 2016 ರಲ್ಲಿ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಹಸ್ತಕ್ಷೇಪ ಆರೋಪದ ಬಗ್ಗೆ ತನಿಖೆ ನಡೆಸಿ  ನೀಡಲಾದ ಮುಲ್ಲರ್‌ ವರದಿಯನ್ನು ರಷ್ಯಾ ಮತ್ತೊಮ್ಮೆ ಒಪ್ಪಿಕೊಂಡಿದೆ. ರಷ್ಯಾ ಹಸ್ತಕ್ಷೇಪದ ಬಗ್ಗೆ ಸಾಬೀತು ಮಾಡುವಲ್ಲಿ ಯಾವುದೇ ಸಾಕ್ಷ್ಯಗಳಿಲ್ಲ ಎಂದು  ಮುಲ್ಲರ್ ವರದಿ ತಿಳಿಸಿತ್ತು.

‘ಮುಲ್ಲರ್‌ ವರದಿಯಲ್ಲಿ ಯಾವುದೇ ಹೊಸ ಅಂಶಗಳಿಲ್ಲ. ಅಮೆರಿಕದ ಚುನಾವಣಾ ಪ್ರಕ್ರಿಯೆಯಲ್ಲಿ ರಷ್ಯಾ ತಲೆಹಾಕಿತ್ತು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ’ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೊವ್‌ ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.

ಟ್ರಂಪ್‌ ಅವರು ಗೆಲುವು ಸಾಧಿಸಿದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈವಾಡವಿತ್ತು ಎಂಬ ಆರೋಪಗಳು ಹೇಳಿಬಂದಾಗಿನಿಂದಲೂ ಅದನ್ನು ರಷ್ಯಾ ಅಲ್ಲಗಳೆಯುತ್ತಲೇ ಬಂದಿದೆ.

ರಷ್ಯಾ ಹಸ್ತಕ್ಷೇಪದ ಬಗ್ಗೆ  ವಿಶೇಷ ವಕೀಲ ರಾಬರ್ಟ್‌ ಮುಲ್ಲರ್‌ ಅವರು ತನಿಖೆ ನಡೆಸಿ ವರದಿ ನೀಡಿದ್ದರು.

‘ರಷ್ಯಾದ ಕೈವಾಡ ಇತ್ತು ಎಂಬ ಆರೋಪಗಳು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತರಲಿವೆ’ ಎಂದು ಪೆಸ್ಕೊವಾ ಹೇಳಿದ್ದಾರೆ.

ರಷ್ಯಾ ಕೈವಾಡ ಇಲ್ಲವೆಂದ ಮೇಲೆ ಅಮೆರಿಕದ ಜನರ ತೆರಿಗೆ ಹಣವನ್ನು ಯಾತಕ್ಕಾಗಿ ತನಿಖೆಗಾಗಿ ವೆಚ್ಚ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.