2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿ ಪ್ರಕಟಣೆ

0
15

ಡಬ್ಲ್ಯೂಎಚ್‌ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು ಆತಂಕಕ್ಕೀಡುಮಾಡಿದ್ದು, ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ಹೇಳಿದೆ.

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಯು 2016ರ ವಿಶ್ವದ ಮಾಲಿನ್ಯ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಭಾರತದ ರಾಷ್ಟ್ರ ರಾಜಧಾನಿ ದೆಹಲಿ, ವಾರಾಣಾಸಿ ನಗರಗಳ ಹೆಸರು ಸೇರಿದೆ.

ಡಬ್ಲ್ಯೂಎಚ್‌ಒ ಬಿಡುಗಡೆ ಮಾಡಿದ 20 ನಗರಗಳಲ್ಲಿ ಭಾರತದ 14 ನಗರಗಳ ಹೆಸರು ಪಟ್ಟಿಯಲ್ಲಿರುವುದು ಆತಂಕಕ್ಕೀಡುಮಾಡಿದ್ದು,  2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ (particulate matter) ಪ್ರಮಾಣ ಸುರಕ್ಷಿತ ಮಟ್ಟಕ್ಕಿಂತ ಹೆಚ್ಚಿದೆ. 

ಮೊದಲ ಸ್ಥಾನದಲ್ಲಿ ದೆಹಲಿ, ಕೈರೋ, ಢಾಕಾ, ಮುಂಬೈ, ಬೀಜಿಂಗ್ ಕ್ರಮವಾಗಿ ಐದು ಸ್ಥಾನಗಳನ್ನು ಪಡೆದಿದೆ. 

ಭಾರತದ ಕಾನ್ಪುರ, ಫರಿದಾಬಾದ್, ಗಯಾ, ಪಟ್ನಾ, ಆಗ್ರಾ, ಮುಜಾಫರ್‌ನಗರ, ಶ್ರೀನಗರ, ಗುರುಗ್ರಾಮ, ಜೈಪುರ, ಪಟಿಯಾಲ, ಜೋಧ್‌ಪುರ, ಕುವೈತಿನ ಅಲಿಸುಬಾಹ್–ಅಲಿ ಸಲೀಮ್ ಹಾಗೂ ಚೀನಾ, ಮಂಗೋಲಿಯಾದ ಕೆಲವು ನಗರಗಳು ಹೆಚ್ಚು ಮಾಲಿನ್ಯ ನಗರಗಳು ಎಂಬ ಹಣೆಪಟ್ಟಿ ಪಡೆದುಕೊಂಡಿದೆ. ಈ ಎಲ್ಲಾ ನಗರಗಳ ವಿಷಾನಿಲ ಕಣಗಳ ಮಟ್ಟ 2.5ಕ್ಕೂ ಹೆಚ್ಚಿದೆ ಎಂದು ವರದಿಯಲ್ಲಿ ತಿಳಿಸಿದೆ.

2016 ವರದಿಯ ಪ್ರಕಾರ ಭಾರತದ ಒಟ್ಟು 13 ನಗರಗಳಲ್ಲಿ ವಿಷಾನಿಲ ಕಣಗಳ ಮಟ್ಟ 10ಕ್ಕೂ ಹೆಚ್ಚಿದೆ. ಪ್ರಪಂಚದಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದು, ಪ್ರತಿವರ್ಷ  70 ಲಕ್ಷ ಮಂದಿ ಶ್ವಾಸಕೋಶ ಕ್ಯಾನ್ಸರ್, ಪಾರ್ಶ್ವಾವಾಯು, ಹೃದಯಾಘಾತ ಹೀಗೆ ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದೆ.

ವಾಯುಮಾಲಿನ್ಯ ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಿರುವವ ಪ್ರಮಾಣ ಕೆಳ ಮತ್ತು ಮಧ್ಯಮ ಆದಾಯ ರಾಷ್ಟ್ರಗಳಲ್ಲಿ ಹೆಚ್ಚಾಗಿವೆ. ಅದರಲ್ಲೂ ಏಷ್ಯಾದಲ್ಲಿನ ಭಾರತ, ಆಫ್ರಿಕಾ ರಾಷ್ಟ್ರಗಳು ವಾಯುಮಾಲಿನ್ಯದ ದುಷ್ಪಪರಿಣಾಮಗಳನ್ನು ಎದುರಿಸುತ್ತಿವೆ ಎಂದು ವರದಿಯಲ್ಲಿದೆ.