2015, 2016, 2017, 2018 ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿ ಪ್ರಕಟ

0
1260

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅಕ್ಷಯ ಪಾತ್ರೆ ಪ್ರತಿಷ್ಠಾನ ಹಾಗೂ ರಾಷ್ಟ್ರದಾದ್ಯಂತ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ ನೈರ್ಮಲ್ಯಕ್ಕೆ ನೆರವಾಗುತ್ತಿರುವ ಸುಲಭ್‌ ಇಂಟರ್‌
ನ್ಯಾಷನಲ್‌ ಸಂಸ್ಥೆ 2016ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಪಾತ್ರವಾಗಿವೆ.

ನವದೆಹಲಿ: ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುತ್ತಿರುವ ಅಕ್ಷಯ ಪಾತ್ರೆ ಪ್ರತಿಷ್ಠಾನ ಹಾಗೂ ರಾಷ್ಟ್ರದಾದ್ಯಂತ  ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಪರಿಸರ ನೈರ್ಮಲ್ಯಕ್ಕೆ ನೆರವಾಗುತ್ತಿರುವ ಸುಲಭ್‌ ಇಂಟರ್‌ನ್ಯಾಷನಲ್‌ ಸಂಸ್ಥೆ 2016ನೇ ಸಾಲಿನ ಗಾಂಧಿ ಶಾಂತಿ ಪ್ರಶಸ್ತಿಗೆ ಪಾತ್ರವಾಗಿವೆ.

ನಾಲ್ಕು ವರ್ಷಗಳ ನಂತರ ಕೇಂದ್ರ ಸರ್ಕಾರ ಪ್ರಶಸ್ತಿಗೆ ಪಾತ್ರರಾದವರ ಪಟ್ಟಿಯನ್ನು ಒಟ್ಟಿಗೆ ಪ್ರಕಟಿಸಿದೆ. ಕನ್ಯಾಕುಮಾರಿ ವಿವೇಕಾನಂದ ಕೇಂದ್ರಕ್ಕೆ 2015ನೇ ಸಾಲಿನ, ಏಕಲ್‌ ಅಭಿಯಾನ ಟ್ರಸ್ಟ್‌ 2017ನೇ ಸಾಲಿನ ಪ್ರಶಸ್ತಿಗೆ ಆಯ್ಕೆಯಾಗಿದೆ. 2018ನೇ ಸಾಲಿನ ಪ್ರಶಸ್ತಿಗೆ ನಿಪ್ಪಾನ್‌ ಫೌಂಡೇಷನ್‌ ಅಧ್ಯಕ್ಷ ಯೋಹೆ ಸಸಕಾವಾ ಪಾತ್ರರಾಗಿದ್ದಾರೆ.
 
# ಗಾಂಧಿ ಶಾಂತಿ ಪ್ರಶಸ್ತಿಯನ್ನು  ಕೇಂದ್ರ ಸರ್ಕಾರ ನೀಡುವುದು

# ಗಾಂಧಿ ಶಾಂತಿ ಪ್ರಶಸ್ತಿಯನ್ನು ನೀಡಲು ಆರಂಭಿಸಿದ ವರ್ಷ : 1995 

# ಈ ಪ್ರಶಸ್ತಿಯ ಜೊತೆಗೆ 1 ಕೋಟಿ ನಗದು ಬಹುಮಾನ ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

# ಮೊದಲ  ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದವರು :  ತಾಂಜೇನಿಯಾದ ಮೊದಲ ಅಧ್ಯಕ್ಷರಾದ ಜೂಲಿಯಸ್ ನೈರೆರೆ