2015 ರಿಂದ ಈವರೆಗೆ(2018) ಭಾರತದಲ್ಲಿ ಹಸಿವಿಗೆ 56 ಬಲಿ

0
396

2015ರಿಂದ ಈವರೆಗೆ ಭಾರತದಲ್ಲಿ ಹಸಿವಿನಿಂದ 56 ಮಂದಿ ಸತ್ತಿದ್ದಾರೆ. ಮೃತರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಯ ಪಡಿತರ ಚೀಟಿಗಳು ಆಧಾರ್ ಸಂಖ್ಯೆ ಜೋಡಣೆ ಮಾಡದ ಕಾರಣ ರದ್ದಾಗಿದ್ದವು ಎಂದು ಅಧ್ಯಯನವೊಂದು ಹೇಳಿದೆ.

2015ರಿಂದ ಈವರೆಗೆ ಭಾರತದಲ್ಲಿ ಹಸಿವಿನಿಂದ 56 ಮಂದಿ ಸತ್ತಿದ್ದಾರೆ. ಮೃತರಲ್ಲಿ ಅರ್ಧಕ್ಕೂ ಹೆಚ್ಚು ಮಂದಿಯ ಪಡಿತರ ಚೀಟಿಗಳು ಆಧಾರ್ ಸಂಖ್ಯೆ ಜೋಡಣೆ ಮಾಡದ ಕಾರಣ ರದ್ದಾಗಿದ್ದವು ಎಂದು ಅಧ್ಯಯನವೊಂದು ಹೇಳಿದೆ. ‘ಆಹಾರದ ಹಕ್ಕು ಅಭಿಯಾನ’ದ ಭಾಗವಾಗಿ ಹಲವು ಸ್ವಯಂಸೇವಾ ಸಂಸ್ಥೆಗಳು ಈ ಅಧ್ಯಯನವನ್ನು ನಡೆಸಿದ್ದವು. ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳು ಮತ್ತು ಸತ್ಯಶೋಧನಾ ಸಮಿತಿಗಳ ವರದಿಗಳನ್ನು ಆಧರಿಸಿ ಸಿದ್ಧಪಡಿಸಿದ ‘ಹಸಿವಿನಿಂದ ಸಾವು: 2015–18’ ವರದಿಯಲ್ಲಿ ಈ ಮಾಹಿತಿ ಇದೆ

 ‘ಆಧಾರ್ ಆಧರಿತ ಪಡಿತರ ವಿತರಣೆಯ ವೈಫಲ್ಯ’

* ಭಾರತದಲ್ಲಿ ಈಗಲೂ ಬಡವರ ದೈನಂದಿನ ಜೀವನ ಅತಂತ್ರವಾಗೇ ಇದೆ ಎಂಬುದನ್ನು ಈ ಸಾವುಗಳು ಸಾಬೀತು ಮಾಡಿವೆ

* ಮೃತರಲ್ಲಿ ಬಹುತೇಕ ಮಂದಿ ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರೇ ಆಗಿದ್ದಾರೆ

* ಮೃತರಲ್ಲಿ ಬಹುತೇಕ ಮಂದಿ ಪಡಿತರ ಮತ್ತು ಸರ್ಕಾರ ನೀಡುತ್ತಿದ್ದ ಪಿಂಚಣಿಯನ್ನೇ ಅವಲಂಬಿಸಿ ಬದುಕುತ್ತಿದ್ದರು. ಪಡಿತರ ವಿತರಣೆ ಮತ್ತು ಪಿಂಚಣಿ ವ್ಯವಸ್ಥೆಗೆ ಆಧಾರ್ ಅನ್ನು ಜೋಡಿಸುವ ಕಾರ್ಯಕ್ರಮದಿಂದಲೇ ಇವರೆಲ್ಲರು ಆ ಸೌಲಭ್ಯಗಳನ್ನು ಕಳೆದುಕೊಂಡಿದ್ದಾರೆ

* ಆಧಾರ್ ಆಧರಿತ ಪಡಿತರ ವಿತರಣಾ ವ್ಯವಸ್ಥೆ ವಿಫಲವಾಗಿರುವುದಕ್ಕೆ ಈ ಸಾವುಗಳೇ ನಿದರ್ಶನ