2006 ರಿಂದ 2016ರ ನಡುವೆ ಭಾರತದಲ್ಲಿ 27.1 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ವಿಶ್ವಸಂಸ್ಥೆ

0
12

ಭಾರತದಲ್ಲಿ ಬಡತನದಲ್ಲಿರುವವರ ಪ್ರಮಾಣ ಕಡಿಮೆಯಾಗುತ್ತಿದ್ದು, 2006 ರಿಂದ 2016ರ ನಡುವಿನ 10 ವರ್ಷಗಳ ಅವಧಿಯಲ್ಲಿ ಒಟ್ಟು 27.1 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ವಿಶ್ವಸಂಸ್ಥೆ: ಭಾರತದಲ್ಲಿ ಬಡತನದಲ್ಲಿರುವವರ ಪ್ರಮಾಣ ಕಡಿಮೆಯಾಗುತ್ತಿದ್ದು, 2006 ರಿಂದ 2016ರ ನಡುವಿನ 10 ವರ್ಷಗಳ ಅವಧಿಯಲ್ಲಿ ಒಟ್ಟು 27.1 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್​ಡಿಪಿ)ಯ 2019ರ ಗ್ಲೋಬಲ್​ ಮಲ್ಟಿಡೈಮೆನ್ಶನಲ್​ ಪಾವರ್ಟಿ ಇಂಡೆಕ್ಸ್​ (ಎಂಪಿಐ)ನ ವರದಿ ಜುಲೈ11ರ ಗುರುವಾರ ಬಿಡುಗಡೆಯಾಗಿದೆ. ಇದರ ಪ್ರಕಾರ ಭಾರತದಲ್ಲಿ ಬಡವರ ಪ್ರಮಾಣ ಕಡಿಮೆಯಾಗಿದೆ. ಒಟ್ಟು 27.1 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ವರದಿಯಲ್ಲಿ ಕೇವಲ ಆದಾಯವನ್ನು ಮಾತ್ರ ಪರಿಗಣಿಸಿದೆ, ಉರುವಲು, ನೈರ್ಮಲ್ಯ, ಆರೋಗ್ಯ, ಪೋಷಕಾಂಶ ಲಭ್ಯತೆ, ಆಸ್ತಿ, ಕೆಲಸ ಮಾಡುವ ಸ್ಥಳದ ಸ್ವಚ್ಛತೆ, ಹಿಂಸಾಚಾರದ ಭೀತಿ ಮುಂತಾದವುಗಳನ್ನು ಸೇರಿಸಿ ಬಡತನದಲ್ಲಿರುವ ಜನರ ಸಂಖ್ಯೆಯನ್ನು ವಿಶ್ವಸಂಸ್ಥೆ ಲೆಕ್ಕ ಹಾಕಿದೆ.

ಒಟ್ಟು 101 ದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಭಾರತ, ಬಾಂಗ್ಲಾದೇಶ, ಕಾಂಬೋಡಿಯಾ, ಕಾಂಗೋ, ಇಥಿಯೋಪಿಯಾ, ಹೈಟಿ, ನೈಜೀರಿಯಾ, ಪಾಕಿಸ್ತಾನ, ಪೆರು ಮತ್ತು ವಿಯೆಟ್ನಾಂನಲ್ಲಿ 200 ಕೋಟಿ ಜನರು ಬಡತನದಿಂದ ಹೊರಬರುವ ಹಾದಿಯಲ್ಲಿದ್ದು, ಶೀಘ್ರ ಅವರು ಬಡತನ ರೇಖೆಯಿಂದ ಹೊರಬರಲಿದ್ದಾರೆ ಎಂದು ವರದಿ ತಿಳಿಸಿದೆ.

ವಿಶ್ವಸಂಸ್ಥೆಯ ವರದಿಯಂತೆ 2006ರಲ್ಲಿ ದೇಶದ 64 ಕೋಟಿ ಜನರು ಬಹುಆಯಾಮದ ಬಡತನದಲ್ಲಿದ್ದರು. ಆದರೆ 2015-16ರಲ್ಲಿ ಬಹುಆಯಾಮದ ಬಡತನದಲ್ಲಿರುವವರ ಪ್ರಮಾಣ 27.9 ಕೋಟಿಗೆ ಇಳಿಕೆಯಾಗಿದೆ. 2005-06ರಲ್ಲಿ 44.3 ಜನರು ಪೋಷಕಾಂಶದ ಅಭಾವದಿಂದ ಬಳಲುತ್ತಿದ್ದರೆ, ಇವರ ಪ್ರಮಾಣ 2015-16ರಲ್ಲಿ ಶೇ. 21.2 ಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ ಉರುವಲು ಮತ್ತು ಅಡುಗೆ ಅನಿಲದ ಅಭಾವದಿಂದ ಬಳಲುತ್ತಿರುವವರ ಪ್ರಮಾಣ ಶೇ. 52.9 ರಿಂದ 26.2 ಕ್ಕೆ ಕಡಿಮೆಯಾಗಿದೆ, ಶಿಶು ಮರಣ ಪ್ರಮಾಣ ಶೇ. 4.4 ರಿಂದ 2.2 ಕ್ಕೆ ಇಳಿಕೆಯಾಗಿದೆ. ನೈಮರ್ಲ್ಯದ ಕೊರತೆಯಿಂದ ಬಳಲುತ್ತಿರುವವ ಪ್ರಮಾಣ ಶೇ. 50.4 ರಿಂದ 24.6 ಕ್ಕೆ ಇಳಿಕೆಯಾಗಿದೆ. ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವವರಸಂಖ್ಯೆ ಶೇ. 16.6 ರಿಂದ 6.2 ಕ್ಕೆ ಇಳಿಕೆಯಾಗಿದೆ. ವಿದ್ಯುತ್​ ಇಲ್ಲದೆ ಬದುಕುತ್ತಿದ್ದವರ ಪ್ರಮಾಣ ಶೇ. 29.1 ರಿಂದ 8.6 ಕ್ಕೆ ಇಳಿಕೆಯಾಗಿದೆ, ಸ್ವಂತ ಸೂರಿಲ್ಲದವರ ಸಂಖ್ಯೆ ಶೇ. 44.9 ರಿಂದ 23.6 ಕ್ಕೆ ಇಳಿಕೆಯಾಗಿದೆ ಎಂದು ವರದಿ ತಿಳಿಸಿದೆ.