20ರ ಹೊಸ ನೋಟು ಶೀಘ್ರ

0
711

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೀಘ್ರವೇ ₹ 20ರ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಶೀಘ್ರವೇ 20ರ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿದೆ.

ಸದ್ಯ ಚಾಲ್ತಿಯಲ್ಲಿರುವ  20ರ ಮುಖಬೆಲೆಯ ನೋಟುಗಳಿಗಿಂತಲೂ ಹೆಚ್ಚಿನ ವೈಶಿಷ್ಟ್ಯವನ್ನು ಹೊಸ ನೋಟು ಹೊಂದಿರಲಿದೆ ಎಂದು ತಿಳಿಸಿದೆ.

2016ರ ನವೆಂಬರ್‌ ಬಳಿಕ ಈ ಹೊಸ ನೋಟುಗಳಲ್ಲಿ ಮಹಾತ್ಮಾ ಗಾಂಧಿಯ ಭಾವಚಿತ್ರದ ಹೊಸ ಸರಣಿ ಪರಿಚಯಿಸಲಾಗಿದೆ. 

ನೋಟು ರದ್ದತಿ ಜಾರಿಯಾದ ಬಳಿಕ ಹೆಚ್ಚಿನ ಸುರಕ್ಷತೆಯ  200 ಮತ್ತು 2 ಸಾವಿರ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಗಿದೆ. ಹೊಸ ವಿನ್ಯಾಸ ಮತ್ತು ಗಾತ್ರದ  1050, 100 ಮತ್ತು 
500ರ ಮುಖಬೆಲೆಯ ನೋಟುಗಳು ಈಗಾಗಲೇ ಚಲಾವಣೆಯಲ್ಲಿವೆ ಎಂದು ತಿಳಿಸಿದೆ.