20ರ ಹೊಸ ನೋಟು ಶೀಘ್ರವೇ ಚಲಾವಣೆಗೆ

0
1211

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಸಿರು ಮಿಶ್ರಿತ ಹಳದಿ ಬಣ್ಣದ ₹ 20ರ ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಹಸಿರು ಮಿಶ್ರಿತ ಹಳದಿ ಬಣ್ಣದ  20ರ ಮುಖಬೆಲೆಯ ಹೊಸ ನೋಟುಗಳನ್ನು ಶೀಘ್ರವೇ ಬಿಡುಗಡೆ ಮಾಡಲಿದೆ.

ಮಹಾತ್ಮ ಗಾಂಧಿಯ ಭಾವಚಿತ್ರದ ಹೊಸ ಸರಣಿಯ ನೋಟುಗಳಲ್ಲಿ ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರ ಹಸ್ತಾಕ್ಷರ ಇರಲಿದೆ. 

ದೇಶದ ಸಾಂಸ್ಕೃತಿ ಪರಂಪರೆಯ ಪ್ರತೀಕವಾಗಿ ನೋಟಿನ ಹಿಂಭಾಗದಲ್ಲಿ ಯೆಲ್ಲೋರ ಗುಹೆಯ ಚಿತ್ರ ಮುದ್ರಿಸಲಾಗಿದೆ. ಸ್ಚಚ್ಛಭಾರತದ ಚಿನ್ಹೆ ಇರಲಿದೆ. 

ಸದ್ಯ ಚಾಲ್ತಿಯಲ್ಲಿರುವ ಕೆಂಪು ಬಣ್ಣದ 20ರ ಮುಖಬೆಲೆಯ ನೋಟು  63 ಎಂಎಂ X 47 ಎಂಎಂ  ಗಾತ್ರದ್ದಾಗಿದೆ. 

ಹೊಸ ನೋಟುಗಳ ಗಾತ್ರ 63ಎಂಎಂX129ಎಂಎಂ ಇರಲಿದೆ ಎಂದು ಆರ್‌ಬಿಐ ಪ್ರಕಟಣೆ
ಯಲ್ಲಿ ಮಾಹಿತಿ ನೀಡಿದೆ.

ಸ್ವಚ್ಛ ಭಾರತ ಸರಣಿಯಲ್ಲಿ ಈಗಾಗಲೇ  1050100 ಮತ್ತು 500ರ ಮುಖಬೆಲೆಯ ನೋಟುಗಳನ್ನು ಬಿಡುಗಡೆ ಮಾಡಲಾಗಿದೆ.

2018ರ ಮಾರ್ಚ್‌ವರೆಗೆ ಚಲಾವಣೆಯಲ್ಲಿ ಇರುವ 20ರ ಮುಖಬೆಲೆಯ ನೋಟುಗಳ ಸಂಖ್ಯೆ 1015 ಕೋಟಿ ಇದೆ.

2019ರ ಮಾರ್ಚ್‌ ಅಂತ್ಯದವರೆಗೆ ಚಲಾವಣೆಯಲ್ಲಿ ಇರುವ ಒಟ್ಟಾರೆ ಕರೆನ್ಸಿ ನೋಟುಗಳಲ್ಲಿ ₹ 20ರ ಮುಖಬೆಲೆಯ ನೋಟುಗಳ ಪ್ರಮಾಣ ಶೇ 9.8ರಷ್ಟಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.