2.5 ಲಕ್ಷ ರೂ. ಗೃಹ ಸಾಲ ಸಬ್ಸಿಡಿ 2020ರವರೆಗೆ ವಿಸ್ತರಣೆ

0
722

ವಾರ್ಷಿಕ 6ರಿಂದ 18 ಲಕ್ಷ ರೂ. ಆದಾಯ ಇರುವವರಿಗೆ ಹಾಗೂ ಮೊದಲ ಸಲ ಮನೆ ಖರೀದಿಸುವವರಿಗೆ ನೀಡುವ ಗೃಹ ಸಾಲ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು 2020ರ ಮಾರ್ಚ್‌ ತನಕ ವಿಸ್ತರಿಸಲಾಗಿದೆ. ಮಧ್ಯಮ ವರ್ಗದ ಆದಾಯ ಹೊಂದಿರುವ ಜನತೆಗೆ ಇದು ಅನುಕೂಲಕರವಾಗಲಿದೆ. ನರೇಂದ್ರ ಮೋದಿ

ಹೊಸದಿಲ್ಲಿ :ವಾರ್ಷಿಕ 6ರಿಂದ 18 ಲಕ್ಷ ರೂ. ಆದಾಯ ಇರುವವರಿಗೆ ಹಾಗೂ ಮೊದಲ ಸಲ ಮನೆ ಖರೀದಿಸುವವರಿಗೆ ನೀಡುವ ಗೃಹ ಸಾಲ ಬಡ್ಡಿ ಸಬ್ಸಿಡಿ ಸೌಲಭ್ಯವನ್ನು 2020ರ ಮಾರ್ಚ್‌ ತನಕ ವಿಸ್ತರಿಸಲಾಗಿದೆ. ಮಧ್ಯಮ ವರ್ಗದ ಆದಾಯ ಹೊಂದಿರುವ ಜನತೆಗೆ ಇದು ಅನುಕೂಲಕರವಾಗಲಿದೆ. 

ಪ್ರಧಾನಮಂತ್ರಿ.  ನರೇಂದ್ರ ಮೋದಿ 2016ರ ಡಿಸೆಂಬರ್‌ 31ರಂದು ಈ ಯೋಜನೆಯನ್ನು ಘೋಷಿಸಿದ್ದರು. ಕ್ರೆಡಿಟ್‌ ಲಿಂಕ್ಡ್‌ ಸಬ್ಸಿಡಿ ಸ್ಕೀಮ್‌ ಫೋರ್‌ ದಿ ಮಿಡ್ಲ್‌ ಇನ್‌ಕಮ್‌ ಗ್ರೂಪ್‌ (ಸಿಎಲ್‌ಎಸ್‌ಎಸ್‌-ಎಂಐಜಿ) ಎಂಬುದು ಯೋಜನೆಯ ಹೆಸರು. ಇದರಡಿಯಲ್ಲಿ ಅರ್ಹ ಫಲಾನುಭವಿ 2.5 ಲಕ್ಷ ರೂ. ತನಕ ಸಬ್ಸಿಡಿ ಪಡೆಯಲಿದ್ದಾರೆ. ಇದನ್ನು ಡೌನ್‌ಪೇಮೆಂಟ್‌ ನೀಡಲು ಬಳಸಬಹುದು. 

ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಖಾತೆ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಈ ವಿಷಯವನ್ನು ಸೋಮವಾರ ಪ್ರಕಟಿಸಿದರು. ಈ ಯೋಜನೆಗೆ ಉತ್ತಮ ಸ್ಪಂದನೆ ಲಭಿಸಿದ್ದು, 1 ಲಕ್ಷ ಮಂದಿ ಈ ವರ್ಷ ಪ್ರಯೋಜನ ಪಡೆದಿದ್ದಾರೆ ಎಂದರು. 

ಮನೆ ಖರೀದಿ ಹಾಗೂ ನಿರ್ಮಾಣಕ್ಕೂ ಈ ಯೋಜನೆಯ ಸೌಲಭ್ಯ ಪಡೆಯಬಹುದು. ಬ್ಯಾಂಕ್‌, ಹೌಸಿಂಗ್‌ ಫೈನಾನ್ಸ್‌ ಕಂಪನಿಗಳಲ್ಲಿ ಗೃಹ ಸಾಲ ನಿರೀಕ್ಷಿಸುವವರು ಇದರ ಪ್ರಯೋಜನ ಗಳಿಸಬಹುದು ಎಂದು ಹರ್‌ದೀಪ್‌ ಸಿಂಗ್ ಹೇಳಿದರು.