2 ಲಕ್ಷ ಕೋಟಿ ರೂ. ತೈಲ ಸಾಲ ಮರುಪಾವತಿ: ಧರ್ಮೇಂದ್ರ ಪ್ರಧಾನ್

0
23

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಹಿಂದಿನ ಯುಪಿಎ ಸರಕಾರವು ತೈಲ ಬಾಂಡ್‌ ಮೂಲಕ ಮಾಡಿದ್ದ 2 ಲಕ್ಷ ಕೋಟಿ ರೂ. ಸಾಲವನ್ನು 70,000 ಕೋಟಿ ರೂ. ಬಡ್ಡಿ ಸಹಿತ ತೀರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ.

ಹೊಸದಿಲ್ಲಿ: ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವು ಹಿಂದಿನ ಯುಪಿಎ ಸರಕಾರವು ತೈಲಬಾಂಡ್‌ ಮೂಲಕ ಮಾಡಿದ್ದ 2 ಲಕ್ಷ ಕೋಟಿ ರೂ. ಸಾಲವನ್ನು 70,000 ಕೋಟಿ ರೂ. ಬಡ್ಡಿ ಸಹಿತ ತೀರಿಸಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ತಿಳಿಸಿದ್ದಾರೆ. 

ತೈಲ ದರ ಏರಿಕೆಯ ಬಗ್ಗೆ ಕಾಂಗ್ರೆಸ್‌ ಇತ್ತೀಚೆಗೆ ಮಾಡಿರುವ ಟೀಕೆಯ ಹಿನ್ನೆಲೆಯಲ್ಲಿ, ಪೆಟ್ರೋಲಿಯಂ ಸಚಿವ ಧಮೇಂದ್ರ ಪ್ರಧಾನ್‌ ತಿರುಗೇಟು ನೀಡಿದ್ದಾರೆ. 
ತುರ್ತುಪರಿಸ್ಥಿತಿಯ 43ನೇ ವರ್ಷಾಚರಣೆ ಪ್ರಯುಕ್ತ ಬಿಜೆಪಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನ್‌, ಕಾಂಗ್ರೆಸ್‌ ಪಕ್ಷ ನೇತೃತ್ವದ ಯುಪಿಎ ಅಧಿಕಾರದಲ್ಲಿದ್ದಾಗ ಖರೀದಿಸಲಾಗಿದ್ದ ತೈಲ ಬಾಂಡ್‌ಗಳ ಪರಿಣಾಮವನ್ನು ವಿವರಿಸಿದರು. 

‘‘ ಕಾಂಗ್ರೆಸ್‌ 2012-2014ರ ತನಕ ಯುಪಿಎ ಸರಕಾರದ ಅವಧಿಯಲ್ಲಿ ಜಾಗತಿಕ ದರ ಹೆಚ್ಚಿದ್ದರೂ, ದೇಶೀಯವಾಗಿ ತೈಲ ದರಗಳು ಉನ್ನತಮಟ್ಟದಲ್ಲಿ ಇರಲಿಲ್ಲ ಎಂದು ವಾದಿಸುತ್ತದೆ. ಆದರೆ ಆಗ ಯುಪಿಎ ಸರಕಾರ 1.44 ಲಕ್ಷ ಕೋಟಿ ರೂ. ಮೌಲ್ಯದ ತೈಲ ಬಾಂಡ್‌ ಖರೀದಿಸಿತ್ತು. ಇದಕ್ಕೆ ಕೇವಲ ಬಡ್ಡಿಯಾಗಿ 70,000 ಕೋಟಿ ರೂ.ಗಳನ್ನು ಎನ್‌ಡಿಎ ಸರಕಾರ ಪಾವತಿಸಿದೆ. ಒಟ್ಟು 2 ಲಕ್ಷ ಕೋಟಿ ರೂ.ಗಳನ್ನು ಮೋದಿ ಸರಕಾರ ಮರು ಪಾವತಿಸಿದೆ’’ ಎಂದು ತಿಳಿಸಿದರು.