18 ಏಷ್ಯನ್‌ ಕ್ರೀಡಾಕೂಟ: ಕುಸ್ತಿ ಕಣದಲ್ಲಿ ಚಿನ್ನ ಗೆದ್ದ ಬಜರಂಗ್

0
1019

ಹರಿಯಾಣದ ಪೈಲ್ವಾನ ಬಜರಂಗ್ ಪುನಿಯಾ ಪುರುಷರ ಫ್ರೀಸ್ಟೈಲ್ ಕುಸ್ತಿಯ 65 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ಭಾನುವಾರ ಸಂಜೆ ನಡೆದ ಫೈನಲ್‌ನಲ್ಲಿ ಬಜರಂಗ್ 11–8ರಿಂದ ಜಪಾನ್ ಟಕಾಟಾನಿ ಡಯಾಚಿ ಅವರ ವಿರುದ್ಧ ಗೆದ್ದರು.

 

# ಈಚೆಗೆ ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೇಲ್ತ್‌ ಗೇಮ್ಸ್‌ನಲ್ಲಿಯೂ ಬಜರಂಗ್ ಚಿನ್ನದ ಪದಕ ಗಳಿಸಿದ್ದರು.  ಒಲಿಂಪಿಯನ್ ಯೋಗೇಶ್ವರ್ ದತ್ ಅವರ ಗರಡಿಯಲ್ಲಿ ತಾಲೀಮು ಮಾಡಿರುವ ಬಜರಂಗ್ ಅವರು 2014 ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಪಡೆದಿದ್ದರು.

# 24 ವರ್ಷದ ಬಜರಂಗ್ ಅವರು ಮೊದಲ ಸುತ್ತಿನಲ್ಲಿ ಬೈ ಪಡೆದರು.  ನಂತರದ ಸುತ್ತಿನಲ್ಲಿ ಅವರು ಎಲ್ಲ ಮೂರು ಬೌಟ್‌ಗಳನ್ನೂ ಗೆದ್ದರು. ಈ ಸುತ್ತಿನಲ್ಲಿ  ಬಜರಂಗ್ 13–3 ರಿಂದ ಉಜ್ಬೇಕಿಸ್ತಾನದ ಸೈರೊಜಿದ್ದೀನ್ ಎದುರು ಗೆದ್ದರು.

ಇನ್ನೊಂದು ಸುತ್ತಿನಲ್ಲಿ ತಜಕೀಸ್ತಾನದ ಫಯಾಜೀವ್ ಅಬ್ದುಲ್‌ಕೊಸಿಮ್ 12–2 ರಿಂದ ಮಂಗೋಲಿಯಾದ ಎನ್‌. ಬ್ಯಾಟ್‌ಮಗನೈ ಬಚಾಲೂ ವಿರುದ್ಧ ಜಯಿಸಿದರು. 

ಭಾನುವಾರ ಮಧ್ಯಾಹ್ನ ದಿಗ್ಗಜ ಕುಸ್ತಿಪಟು ಸುಶೀಲ್‌ ಕುಮಾರ್ ಅವರು ಅರ್ಹತಾ ಸುತ್ತಿನಲ್ಲಿ ಸೋತಿದ್ದ ನಿರಾಸೆಯಲ್ಲಿದ್ದ ಪ್ರೇಕ್ಷಕರು ಬಜರಂಗ್ ಗೆಲುವಿನಿಂದ ಸಂತಸದ ಕಡಲಲ್ಲಿ ಮುಳುಗೆದ್ದರು. ತ್ರಿವರ್ಣ ಧ್ವಜವು ಅರಳಿತು. ಪ್ರೇಕ್ಷಕರತ್ತ ಕೈಬೀಸಿ ಅಭಿನಂದಿಸಿದ ಪುನಿಯಾ ಕಂಗಳಲ್ಲಿ ಆನಂದಭಾಷ್ಪ ಜಿನುಗುತ್ತಿತ್ತು.