17 ನೇ ಲೋಕಸಭೆ ಸ್ಪೀಕರ್​ ಆಗಿ ರಾಜಸ್ಥಾನದ ಸಂಸದ “ಓಂ ಬಿರ್ಲಾ” ಆಯ್ಕೆ

0
126

ಎರಡನೇ ಬಾರಿಗೆ ಸಂಸದರಾಗಿರುವ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ ಅವಿರೋಧವಾಗಿ 17ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ನವದೆಹಲಿ: ಎರಡನೇ ಬಾರಿಗೆ ಸಂಸದರಾಗಿರುವ ರಾಜಸ್ಥಾನದ ಕೋಟಾ ಸಂಸದ ಓಂ ಬಿರ್ಲಾ ಅವಿರೋಧವಾಗಿ 17ನೇ ಲೋಕಸಭೆಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.

ಓಂ ಬಿರ್ಲಾ ಅವರನ್ನು ಎನ್​ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿತ್ತು. ವಿರೋಧ ಪಕ್ಷಗಳು ಬೇರೆ ಅಭ್ಯರ್ಥಿಯನ್ನು ಕಣಕ್ಕಿಳಿಸದ ಹಿನ್ನೆಲೆಯಲ್ಲಿ ಬಿರ್ಲಾ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.  ಜೂನ್ 19 ರ ಬುಧವಾರ ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್​ ಹುದ್ದೆಗೆ ಓಂ ಬಿರ್ಲಾ ಅವರ ಹೆಸರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೂಚಿಸಿದರು. ಕಾಂಗ್ರೆಸ್​ ಸೇರಿದಂತೆ ಇತರ ಪಕ್ಷಗಳು ಬಿರ್ಲಾಗೆ ಬೆಂಬಲ ಸೂಚಿಸಿದ್ದರಿಂದ ಅವರನ್ನು ಅಧಿಕೃತವಾಗಿ ಸ್ಪೀಕರ್​ ಆಗಿ ಆಯ್ಕೆ ಮಾಡಲಾಯಿತು. ನಂತರ ಹಂಗಾಮಿ ಸ್ಪೀಕರ್​ ವೀರೇಂದ್ರ ಕುಮಾರ್​ ಅವರು ಓಂ ಬಿರ್ಲಾಗೆ ಅಧಿಕಾರ ಹಸ್ತಾಂತರಿಸಿದರು.

ಓಂ ಬಿರ್ಲಾ ಸ್ಪೀಕರ್​ ಆಗಿ ಆಯ್ಕೆಯಾಗುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್​, ಡಿಎಂಕೆ, ತೃಣಮೂಲ ಕಾಂಗ್ರೆಸ್​ ನಾಯಕರು ಅವರನ್ನು ಅಭಿನಂಧಿಸಿದರು.

ಓಂ ಬಿರ್ಲಾ ರಾಜಸ್ಥಾನದ ದಕ್ಷಿಣ ಕೋಟಾ ವಿಧಾನಸಭೆ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ರಾಜಸ್ತಾನ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. 2014ರಲ್ಲಿ ಅವರು ಕೋಟಾ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದರು, ಈ ಬಾರಿ ಅವರು ಪುನರಾಯ್ಕೆಯಾಗಿದ್ದರು. ಹಿಂದಿನ ಸರ್ಕಾರದಲ್ಲಿ ಇವರು ಇಂಧನ ಹಾಗೂ ಸಮಾಜ ಕಲ್ಯಾಣ ಸಚಿವಾಲಯದ ಸದನ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದರು.