17 ಅತಿ ಹಿಂದುಳಿದ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕ್ರಮ

0
62

ಇದುವರೆಗೂ ಅತಿ ಹಿಂದುಳಿದ ವರ್ಗಗಳಲ್ಲಿದ್ದ 17 ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಿ ಸಿಎಂ ಯೋಗಿ ಆದಿತ್ಯನಾಥ್​ ಆದೇಶ ಹೊರಡಿಸಿದ್ದಾರೆ. ಈ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವಂತೆ ಅಲಹಾಬಾದ್​ ಹೈಕೋರ್ಟ್​ 2017ರಲ್ಲೇ ಆದೇಶಿಸಿತ್ತು. ಆ ಆದೇಶವನ್ನು ಈಗ ಜಾರಿಗೊಳಿಸಲು ಯೋಗಿ ಆದಿತ್ಯನಾಥ್​ ನಿರ್ಧರಿಸಿದರು.

ಲಖನೌ: ಇದುವರೆಗೂ ಅತಿ ಹಿಂದುಳಿದ ವರ್ಗಗಳಲ್ಲಿದ್ದ 17 ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡಿ ಸಿಎಂ ಯೋಗಿ ಆದಿತ್ಯನಾಥ್​ ಆದೇಶ ಹೊರಡಿಸಿದ್ದಾರೆ. ಈ ಜಾತಿಗಳಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವಂತೆ ಅಲಹಾಬಾದ್​ ಹೈಕೋರ್ಟ್​ 2017ರಲ್ಲೇ ಆದೇಶಿಸಿತ್ತು. ಆ ಆದೇಶವನ್ನು ಈಗ ಜಾರಿಗೊಳಿಸಲು ಯೋಗಿ ಆದಿತ್ಯನಾಥ್​ ನಿರ್ಧರಿಸಿದರು.

ಈ ಆದೇಶದ ಪ್ರಕಾರ ಇದುವರೆಗೂ ಅತಿ ಹಿಂದುಳಿದ ವರ್ಗಗಳಾಗಿದ್ದ ಕಶ್ಯಪ್​, ರಾಜ್​ಭರ್​, ಧಿವರ್​, ಬಿಂಡ್​, ಕುಮಾರ್​, ಕಹರ್​, ಕೇವತ್​, ನಿಶಾದ್​, ಭಾರ್​, ಮಲ್ಹಾ, ಪ್ರಜಾಪತಿ, ಭಾಟಂ, ತುರ್ಹಾ, ಗೋಡಿಯಾ, ಮಂಜುಲ್​ ಮತ್ತು ಮಧುವಾ ಸೇರಿ 17 ಸಮುದಾಯದವರಿಗೆ ಇನ್ಮುಂದೆ ಎಸ್​ಸಿ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ. ಈ ವಿಷಯವಾಗಿ ಅಲಹಾಬಾದ್​ ಹೈಕೋರ್ಟ್​ ಅಂತಿಮ ಆದೇಶ ಹೊರಡಿಸುವವರೆಗೂ ಈ ಜಾತಿಗಳವರಿಗೆ ಎಸ್​ಸಿ ಪ್ರಮಾಣಪತ್ರ ನೀಡುವಂತೆ ಉತ್ತರ ಪ್ರದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸಿಎಂ ಯೋಗಿ ಆದಿತ್ಯನಾಥ್​ ಸೂಚಿಸಿದ್ದಾರೆ.

ಮುಲಾಯಂ ಸಿಂಗ್​ ಯಾದವ್​ 2006ರಲ್ಲಿ ತಾವು ಸಿಎಂ ಆಗಿದ್ದಾಗ ಈ ಆದೇಶವನ್ನು ಜಾರಿಗೊಳಿಸಲು ಪ್ರಯತ್ನಿಸಿದ್ದರು. ಅವರಂತೆ 2007-2012ರ ನಡುವೆ ಸಿಎಂ ಆಗಿದ್ದ ಮಾಯಾವತಿ ಕೂಡ ಇಂಥದ್ದೇ ಪ್ರಯತ್ನ ಮಾಡಿದ್ದರು. ಆದರೆ, ಕೇಂದ್ರ ಸರ್ಕಾರ ಇವರಿಬ್ಬರ ನಿರ್ಧಾರಕ್ಕೆ ಅಡ್ಡಗಾಲು ಹಾಕಿತ್ತು. ಆದರೆ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಎಂ ಆದಿತ್ಯನಾಥ ಈ ನಿರ್ಧಾರ ಕೈಗೊಂಡಿದ್ದಾರೆ. ಹಾಗಾಗಿ ಕೇಂದ್ರ ಸರ್ಕಾರ ಇದಕ್ಕೆ ಸಮ್ಮತಿಸುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ. (ಏಜೆನ್ಸೀಸ್​)