163 ದಿಲ್ಲಿ ಕುಬೇರರ ಬಳಿ 6.78 ಲಕ್ಷ ಕೋಟಿ ರೂ. ಸಂಪತ್ತು!

0
435

2018ರ ಬಾಕ್ರ್ಲೆಸ್‌ ಹ್ಯುರುನ್‌ ಇಂಡಿಯಾ ರಿಚ್‌ ಪಟ್ಟಿಯಲ್ಲಿರುವ 163 ದಿಲ್ಲಿ ಕುಬೇರರ ಬಳಿ ಇರುವ ಒಟ್ಟು ಸಂಪತ್ತಿನ ಮೌಲ್ಯ ಎಷ್ಟು ಗೊತ್ತೆ? ಜಾಸ್ತಿಯೇನಿಲ್ಲ… ಕೇವಲ 6,78,400 ಕೋಟಿ ರೂ.!

ಹೊಸದಿಲ್ಲಿ: 2018ರ ಬಾಕ್ರ್ಲೆಸ್‌ ಹ್ಯುರುನ್‌ ಇಂಡಿಯಾ ರಿಚ್‌ ಪಟ್ಟಿಯಲ್ಲಿರುವ 163 ದಿಲ್ಲಿ ಕುಬೇರರ ಬಳಿ ಇರುವ ಒಟ್ಟು ಸಂಪತ್ತಿನ ಮೌಲ್ಯ ಎಷ್ಟು ಗೊತ್ತೆ? ಜಾಸ್ತಿಯೇನಿಲ್ಲ… ಕೇವಲ 6,78,400 ಕೋಟಿ ರೂ.! 

ದಿಲ್ಲಿ ಕುಬೇರರ ಪಟ್ಟಿಯಲ್ಲಿ ಎಚ್‌ಸಿಎಲ್‌ನ ಶಿವ ನಾಡಾರ್‌(ಒಟ್ಟು ಸಂಪತ್ತು 37,400 ಕೋಟಿ ರೂ.), ಐಷರ್‌ ಮೋಟಾರ್‌ನ ವಿಕ್ರಮ್‌ ಲಾಲ್‌(ಒಟ್ಟು ಸಂಪತ್ತು 37,100 ಕೋಟಿ ರೂ.) ಮತ್ತು ರೋಶ್ನಿ ನಾಡರ್‌(ಒಟ್ಟು ಸಂಪತ್ತು 31,400 ಕೋಟಿ ರೂ.) ಕ್ರಮವಾಗಿ ಮೊದಲ ಸ್ಥಾನಗಳಲ್ಲಿದ್ದಾರೆ. ಭಾರತಿ ಏರ್‌ಟೆಲ್‌ನ ಸುನಿಲ್‌ ಮಿತ್ತಲ್‌ ಮತ್ತು ಅವರ ಕುಟುಂಬ(ಒಟ್ಟು ಸಂಪತ್ತು 22,500 ಕೋಟಿ ರೂ.) ನಾಲ್ಕನೇ ಸ್ಥಾನದಲ್ಲಿದೆ. ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ನಲ್ಲಿ ಭಾರತದ ಕುಬೇರರ ಸಂಪತ್ತನ್ನು ಲೆಕ್ಕಹಾಕಲಾಗಿದೆ. 1,000 ಕೋಟಿ ರೂ. ಅಥವಾ ಅದಕ್ಕೂ ಹೆಚ್ಚಿನ ಸಂಪತ್ತು ಹೊಂದಿದವರನ್ನು ಗುರ್ತಿಸಲಾಗಿದ್ದು, ಮುಂಬಯಿನಲ್ಲಿ ಇಂಥ 233 ಕುಬೇರರು, ಬೆಂಗಳೂರಿನ್ಲಲಿ 69 ಕುಬೇರರು ಇದ್ದಾರೆ.