16 ನಿವೃತ್ತ ಪೊಲೀಸರಿಗೆ ಜೀವಾವಧಿ ಶಿಕ್ಷೆ : ದೆಹಲಿ ಹೈಕೋರ್ಟ್‌

0
394

ಉತ್ತರಪ್ರದೇಶದ ಮೀರತ್‌ನ ಹಾಶಿಂಪುರದಲ್ಲಿ 1987ರಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 42 ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 16 ನಿವೃತ್ತ ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿ ಅಕ್ಟೋಬರ್ 31 ರ ಬುಧವಾರ ತೀರ್ಪು ನೀಡಿದೆ.

ನವದೆಹಲಿ (ಪಿಟಿಐ): ಉತ್ತರಪ್ರದೇಶದ ಮೀರತ್‌ನ ಹಾಶಿಂಪುರದಲ್ಲಿ 1987ರಲ್ಲಿ ನಡೆದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 42 ಜನರ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 16 ನಿವೃತ್ತ ಪೊಲೀಸರಿಗೆ ದೆಹಲಿ ಹೈಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿ ಅಕ್ಟೋಬರ್ 31 ರ  ಬುಧವಾರ ತೀರ್ಪು ನೀಡಿದೆ.

ಆರೋಪಿಗಳಾದ ನಿವೃತ್ತ ಪೊಲೀಸರನ್ನು ದೋಷಮುಕ್ತರನ್ನಾಗಿ ಮಾಡಿ ಅಧೀನ ನ್ಯಾಯಾಲಯ ನೀಡಿದ್ದ ತೀರ್ಪನ್ನು ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಸ್‌.ಮುರಳೀಧರ್‌ ಹಾಗೂ ವಿನೋದ್‌ ಗೋಯಲ್‌ ಅವರಿದ್ದ ಪೀಠ ರದ್ದುಪಡಿಸಿದೆ. ಶಿಕ್ಷೆಗೆ ಒಳಗಾದವರು ನ. 22ರ ಒಳಗಾಗಿ ಶರಣಾಗಬೇಕು ಎಂದೂ ಪೀಠ ಆದೇಶಿಸಿದೆ.

 ‘ತಮ್ಮನ್ನು ರಕ್ಷಿಸಿಕೊಳ್ಳಲು ಶಸ್ತ್ರಗಳನ್ನು ಹೊಂದಿರದ ಹಾಗೂ ರಕ್ಷಣೆಯೂ ಇಲ್ಲದ ಜನರನ್ನು ಗುರಿಯಾಗಿಸಿ ಹತ್ಯೆ ಮಾಡಲಾಗಿದೆ’ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ, ‘ಅಪಹರಣ, ಕ್ರಿಮಿನಲ್‌ ಸಂಚು, ಕೊಲೆ ಹಾಗೂ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ’ ಆರೋಪದಡಿ ಶಿಕ್ಷೆ 
ಪ್ರಕಟಿಸಿದೆ.