15ನೇ ವಿತ್ತ ಆಯೋಗಕ್ಕೆ ಎನ್.ಕೆ. ಸಿಂಗ್ ಅಧ್ಯಕ್ಷ

0
30

ಯೋಜನಾ ಆಯೋಗದ ಮಾಜಿ ಸದಸ್ಯ ಎನ್.ಕೆ.ಸಿಂಗ್​ರನ್ನು ಹಣಕಾಸು ಆಯೋಗದ 15ನೇ ಮುಖ್ಯಸ್ಥರನ್ನಾಗಿ ಸೋಮವಾರ ನೇಮಿಸಲಾಗಿದೆ.

ಆರ್ಥಿಕ ವ್ಯವಹಾರಗಳ ಮಾಜಿ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಮುಖ್ಯ ಆರ್ಥಿಕ ಸಲಹೆಗಾರ ಅಶೋಕ್ ಲಾಹಿರಿ, ನೀತಿ ಆಯೋಗದ ಸದಸ್ಯ ರಮೇಶ್ ಚಂದ್, ಜಾರ್ಜ್​ಟವ್ನ್ ವಿಶ್ವವಿದ್ಯಾಲ ಯದ ಪ್ರೊಫೆಸರ್ ಅನೂಪ್ ಸಿಂಗ್ರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಜಿಎಸ್​ಟಿಯಿಂದ ಕೇಂದ್ರ, ರಾಜ್ಯಗಳ ಆರ್ಥಿಕತೆ ಮೇಲಿನ ಪ್ರಭಾವದ ಕುರಿತು ವರದಿ ಸಿದ್ಧಪಡಿಸುವಂತೆ ಆಯೋಗಕ್ಕೆ ಸೂಚಿಸಲಾಗಿದೆ. 2019ರ ಅಕ್ಟೋಬರ್ ತಿಂಗಳ ಒಳಗಾಗಿ ಆಯೋಗ ವರದಿ ಸಲ್ಲಿಕೆ ಮಾಡಬೇಕು.