149 ವರ್ಷದ ಬಳಿಕ ಪಾರ್ಶ್ವ ಚಂದ್ರಗ್ರಹಣ: ಅರುಣಾಚಲ ಪ್ರದೇಶ ಬಿಟ್ಟು ಭಾರತದೆಲ್ಲೆಡೆ ಇಂದು ಗೋಚರ

0
61

ಭಾರತ ಸೇರಿದಂತೆ ಬಹುತೇಕ ವಿಶ್ವ ರಾಷ್ಟ್ರಗಳು ಜುಲೈ 16 ರ ಮಂಗಳವಾರ ರಾತ್ರಿ ಪಾರ್ಶ್ವ ಚಂದ್ರಗಹಣದ ವಿಸ್ಮಯ ಕಣ್ತುಂಬಿಕೊಳ್ಳಲಿವೆ. 149 ವರ್ಷಗಳ ಬಳಿಕ ಗೋಚರವಾಗುತ್ತಿರುವ ಪಾರ್ಶ್ವ ಚಂದ್ರಗ್ರಹಣ ಗುರುಪೂರ್ಣಿಮೆ ದಿನವೇ ಸಂಭವಿಸುತ್ತಿರುವುದು ಮತ್ತೊಂದು ವಿಶೇಷ. ಇದು ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣವಾಗಲಿದೆ.

ನವದೆಹಲಿ: ಭಾರತ ಸೇರಿದಂತೆ ಬಹುತೇಕ ವಿಶ್ವ ರಾಷ್ಟ್ರಗಳು ಜುಲೈ 16 ರ  ಮಂಗಳವಾರ ರಾತ್ರಿ ಪಾರ್ಶ್ವ ಚಂದ್ರಗಹಣದ ವಿಸ್ಮಯ ಕಣ್ತುಂಬಿಕೊಳ್ಳಲಿವೆ. 149 ವರ್ಷಗಳ ಬಳಿಕ ಗೋಚರವಾಗುತ್ತಿರುವ ಪಾರ್ಶ್ವ ಚಂದ್ರಗ್ರಹಣ ಗುರುಪೂರ್ಣಿಮೆ ದಿನವೇ ಸಂಭವಿಸುತ್ತಿರುವುದು ಮತ್ತೊಂದು ವಿಶೇಷ. ಇದು ಈ ವರ್ಷದ ಎರಡನೇ ಹಾಗೂ ಕೊನೆಯ ಚಂದ್ರಗ್ರಹಣವಾಗಲಿದೆ.  ಅರುಣಾಚಲಪ್ರದೇಶದ ದುರ್ಗಮ ಉತ್ತರ ಪೂರ್ವ ಭಾಗ ಹೊರತುಪಡಿಸಿ ದೇಶದ ಎಲ್ಲ ಭಾಗದಲ್ಲೂ ಗ್ರಹಣ ಗೋಚರಿಸಲಿದೆ.

ಮಂಗಳವಾರ ಮದ್ಯರಾತ್ರಿ 12 .12ಕ್ಕೆ ಆರಂಭವಾಗುವ ಚಂದ್ರಗ್ರಹಣ ಜುಲೈ 17 ರ ಬುಧವಾರ ನಸುಕಿನ 4.30 ಗಂಟೆಗೆ ವಿಮೋಚನೆಯಾಗಲಿದೆ. ಕಳೆದ ಜುಲೈ 2ರಂದು ಸೂರ್ಯಗ್ರಹಣದ ಸಂಭವಿಸಿತ್ತು. ಮಂಗಳವಾರದ ಚಂದ್ರಗ್ರಹಣವು 2019ರ ಕೊನೆಯ ಚಂದ್ರಗ್ರಹಣವಾಗಿದ್ದು, 2020ರ ಜನವರಿ 10ರಂದು ಮುಂದಿನ ಚಂದ್ರಗ್ರಹಣ ಸಂಭವಿಸಲಿದೆ.

ಈ ವರ್ಷ ಜನೇವರಿ .20-21ರಂದು ಸಂಭವಿಸಿದ್ದ ಚಂದ್ರಗ್ರಹಣ (ಸೂಪರ್ ಬ್ಲಡ್ ವೂಲ್ಪ್ ಮೂನ್) ಅಮೆರಿಕ, ಗ್ರೀನ್ಲೆಂಡ್, ಐಸ್ಲೆಂಡ್, ಐರ್ಲೆಂಡ್, ನಾರ್ವೆ ಸ್ವೀಡನ್, ಫ್ರಾನ್ಸ್ ಮುಂತಾದ ದೇಶಗಳಲ್ಲಷ್ಟೇ ಕಂಡಿತ್ತು. ಆದರೆ ಈ ಬಾರಿಯ ಚಂದ್ರಗ್ರಹಣ ಭಾರತದಲ್ಲಿ ಸೂಪರ್ ಬ್ಲಡ್ ವೂಲ್ಪ್ ಮೂನ್ ಮಾದರಿಯಲ್ಲೇ ಗೋಚರಿಸಲಿದೆ.

ಚಂದ್ರಗ್ರಹಣ ಎಂದರೆ:  ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಭೂಮಿಯ ನೆರಳು ಚಂದ್ರನ ಮೇಲೆ ಬಿದ್ದು ಚಂದ್ರಗ್ರಹಣ ಸಂಭವಿಸುತ್ತದೆ.

ಹಾಫ್ ಬ್ಲಡ್ ಥಂಡರ್ ಮೂನ್

ಚಂದ್ರ ಭೂಮಿ ಸಮೀಪ ಬಂದಾಗ ಇತರ ದಿನಗಳಿಗಿಂತ ದೊಡ್ಡದಾಗಿ ಕಾಣುತ್ತಾನೆ. ಈ ಬಾರಿಯ ಚಂದ್ರಗ್ರಹಣ ಅಂಶಿಕವಾಗಿರುವುದರಿಂದ ವಿಜ್ಞಾನಿಗಳು ಇದನ್ನು ಹಾಫ್ ಬ್ಲಡ್ ಥಂಡರ್ ಮೂನ್ ಎಂದು ಕರೆದಿದ್ದಾರೆ.