129 ಭಾರತೀಯ ವಿದ್ಯಾರ್ಥಿಗಳ ಬಂಧನ (ಅಮೆರಿಕದ ನಕಲಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೋಂದಣಿ ಪ್ರಕರಣ)

0
847

ಅಮೆರಿಕದ ನಕಲಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಭಾರತೀಯ ಮೂಲದ 129 ವಿದ್ಯಾರ್ಥಿಗಳನ್ನು ವಲಸೆ ಮತ್ತು ಸುಂಕ ಜಾರಿ ಇಲಾಖೆಯ (ಐಸಿಇ) ಅಧಿಕಾರಿಗಳು ಬಂಧಿಸಿದ್ದಾರೆ.

ಡೆಟ್ರಾಯಿಟ್: ಅಮೆರಿಕದ ನಕಲಿ ವಿಶ್ವವಿದ್ಯಾಲಯವೊಂದರಲ್ಲಿ ಹೆಸರು ನೋಂದಣಿ ಮಾಡಿಕೊಂಡಿದ್ದ ಭಾರತೀಯ ಮೂಲದ 129 ವಿದ್ಯಾರ್ಥಿಗಳನ್ನು ವಲಸೆ ಮತ್ತು ಸುಂಕ ಜಾರಿ ಇಲಾಖೆಯ (ಐಸಿಇ) ಅಧಿಕಾರಿಗಳು ಬಂಧಿಸಿದ್ದಾರೆ.

ಸದರಿ ವಿವಿ ನಕಲಿ ಎಂಬುದು ಭಾರತೀಯ ವಿದ್ಯಾರ್ಥಿಗಳಿಗೆ ತಿಳಿದಿರಲಿಲ್ಲ. ವಿದ್ಯಾರ್ಥಿಗಳನ್ನು ಬಂಧಿಸಲು ವಲಸೆ ಇಲಾಖೆ ಅಧಿಕಾರಿಗಳು ಮಾಡಿರುವ ಷಡ್ಯಂತ್ರ ಇದು ಎಂದು ವಿದ್ಯಾರ್ಥಿಗಳ ಪರ ವಕೀಲರು ಆರೋಪಿಸಿದ್ದಾರೆ. ಡೆಟ್ರಾಯಿಟ್​ನ ಫಾರ್ವಿುಂಗ್ಟನ್ ಹಿಲ್ಸ್​ನ ವಿವಿ, ಹೋಂಲ್ಯಾಂಡ್ ಭದ್ರತಾ ಇಲಾಖೆ ಜತೆಗೆ ಕೈಜೋಡಿಸಿದೆ. ಹೊರ ದೇಶಗಳಿಂದ ಬಂದ ವಿದ್ಯಾರ್ಥಿಗಳನ್ನು ವಲಸೆ ವಂಚನೆ ಆರೋಪದಲ್ಲಿ ಸಿಲುಕಿಸುವ ಕಾರ್ಯಾಚರಣೆಗೆ ಸಹಕಾರ ನೀಡುತ್ತಿದೆ ಎಂದು ದೂರಿದ್ದಾರೆ.

ಆದರೆ, ವಕೀಲರ ವಾದವನ್ನು ಅಲ್ಲಗಳೆದಿರುವ ವಲಸೆ ಇಲಾಖೆ, ಹೊರ ದೇಶದ ವಿದ್ಯಾರ್ಥಿಗಳು ವೀಸಾ ಅವಧಿಯನ್ನು ವಿಸ್ತರಿಸಿಕೊಂಡು ಅಮೆರಿಕದಲ್ಲಿ ನೆಲೆಸಲು ನಕಲಿ ವಿವಿಗಳು ನೀಡುವ ‘ಪೇ ಆಂಡ್ ಸ್ಟೇ’ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳುತ್ತಾರೆ. ಇದು ಅರಿವಿನ ಕೊರತೆಯಿಂದ ಆಗಿದ್ದಲ್ಲ, ಉದ್ದೇಶಪೂರ್ವಕ ಎಂದು ಹೇಳಿದೆ. -ಏಜೆನ್ಸೀಸ್

ವಿದೇಶಾಂಗ ಸಚಿವಾಲಯ ನೆರವು

ಬಂಧಿತ ವಿದ್ಯಾರ್ಥಿಗಳ ಸ್ಥಿತಿಗತಿ ತಿಳಿಯಲು ಭಾರತದ ವಿದೇಶಾಂಗ ಸಚಿವಾಲಯ ಸಹಾಯವಾಣಿ ಆರಂಭಿಸಿದೆ. ಭಾರತೀಯ ವಿದ್ಯಾರ್ಥಿಗಳ ರಕ್ಷಣೆ ಸಚಿವಾಲಯದ ಮೊದಲ ಆದ್ಯತೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.