12 ಆವೃತ್ತಿಯ ಐ.ಸಿ.ಸಿ ಏಕದಿನ ಕ್ರಿಕೆಟ್ ಗೆ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಸದಸ್ಯರ ಪಟ್ಟಿ ಪ್ರಕಟ

0
309

12 ಆವೃತ್ತಿಯ ಐ.ಸಿ.ಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಸರಣಿಯು ಇಂಗ್ಲೆಂಡ್ ನಲ್ಲಿ 2019 ರ ಮೇ 30 ರಿಂದ ಜುಲೈ 14 ರವರೆಗೆ ನಡೆಯಲಿದೆ. ಈ ವಿಶ್ವಕಪ್ ನಲ್ಲಿ ಭಾಗವಹಿಸಲಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ದೇಶಗಳು ತಮ್ಮ ತಂಡದ ಸದಸ್ಯರ ಪಟ್ಟಿಯಲ್ಲಿ ಪ್ರಕಟಿಸಿವೆ

ವಿಶ್ವಕಪ್‌ಗೆ ಲಂಕಾ ತಂಡ: ಕರುಣರತ್ನೆಗೆ ನಾಯಕತ್ವ

ವಿಶ್ವಕಪ್‌ಗೆ ದಿಮುತ್‌ ಕರುಣರತ್ನೆ ನಾಯಕತ್ವದ 15 ಆಟಗಾರರ ತಂಡವನ್ನು ಶ್ರೀಲಂಕಾ ಕ್ರಿಕೆಟ್‌ ಸಂಸ್ಥೆ ರಚಿಸಿದೆ. 

ಏಪ್ರೀಲ್ 17 ರ ಬುಧವಾರ ತಂಡದ ಆಯ್ಕೆಯನ್ನು ಪ್ರಕಟಿಸಿರುವ ಸಂಸ್ಥೆ, ಅಚ್ಚರಿಯ ಬದಲಾವಣೆಗಳನ್ನು ಮಾಡಿದೆ. ದಿನೇಶ್‌ ಚಾಂಡಿಮಲ್‌,  ವಿಕೆಟ್‌ ಕೀಪರ್ ನಿರೋಷನ್ ಡಿಕ್ವೆಲ್ಲ, ಸ್ಪಿನ್ನರ್‌ ಅಖಿಲ ಧನಂಜಯ, ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಧನುಷ್ಕ ಗುಣತಿಲಕ ಮತ್ತು ಉಪುಲ್‌ ತರಂಗ ಅವರನ್ನು ಕೈಬಿಟ್ಟಿದೆ.

ಕಳೆದ ವರ್ಷದಿಂದ ಏಕದಿನ ತಂಡದಲ್ಲಿ ಸ್ಥಾನ ಪಡೆಯದ ಲಾಹಿರು ತಿರಿಮನ್ನೆ, ಆಲ್‌ರೌಂಡರ್‌ಗಳಾದ ಮಿಲಿಂದ ಸಿರಿವರ್ಧನ, ಜೀವನ್‌ ಮೆಂಡಿಸ್‌ ಮತ್ತು ಲೆಗ್‌ ಸ್ಪಿನ್ನರ್‌ ಜೆಫ್ರಿ ವಂಡರ್ಸೆ ಅವಕಾಶ ನೀಡಿದೆ. ಲಸಿತ್‌ ಮಾಲಿಂಗ ಮತ್ತು ಕರುಣರತ್ನೆ ಅವರ ನಡುವೆ ನಾಯಕತ್ವಕ್ಕಾಗಿ ಪೈಪೋಟಿ ನಡೆದಿತ್ತು. ಆಯ್ಕೆ ಸಮಿತಿ ಅಂತಿಮವಾಗಿ ದಿಮುತ್‌ ಕರುಣರತ್ನೆ ಅವರಿಗೆ ಮಣಿ ಹಾಕಿದೆ. ಯುವ ಆಟಗಾರರಾದ ಆವಿಷ್ಕ ಫರ್ನಾಂಡೊ ಮತ್ತು ನುವಾನ್‌ ಪ್ರದೀಪ್‌ ಅವರೂ ಸ್ಥಾನ ಪಡೆದಿದ್ದಾರೆ. 

ವಿಶ್ವಕಪ್‌ ತಂಡ: ದಿಮುತ್‌ ಕರುಣ ರತ್ನೆ (ನಾಯಕ), ಲಸಿತ್‌ ಮಾಲಿಂಗ, ಏಂಜಲೊ ಮ್ಯಾಥ್ಯೂಸ್, ತಿಸಾರ ಪೆರೇರ, ಕುಶಾಲ್ ಪೆರೇರ, ಧನಂಜಯ ಡಿಸಿಲ್ವ, ಕುಶಾಲ್‌ ಮೆಂಡಿಸ್, ಇಸುರು ಉದಾನ, ಸಿರಿವರ್ಧನ, ಆವಿಷ್ಕ ಫರ್ನಾಂಡೊ, ಜೀವನ್‌ ಮೆಂಡಿಸ್‌, ಲಾಹಿರು ತಿರಿಮನ್ನೆ, ಜೆಫ್ರಿ ವಾಂಡರ್ಸೆ, ನುವಾನ್‌ ಪ್ರದೀಪ್‌, ಸುರಂಗ ಲಕ್ಮಲ್‌. 

ವಿಶ್ವಕಪ್‌ಗೆ ಪಾಕಿಸ್ತಾನ ತಂಡದ ಆಯ್ಕೆ

ಕರಾಚಿ: ಸರ್ಫಾಜ್ ಅಹ್ಮದ್‌ ನೇತೃತ್ವದ 15 ಆಟಗಾರರ ತಂಡವನ್ನು ಪಾಕಿಸ್ತಾನ ಪ್ರಕಟಿಸಿದ್ದು, ವೇಗದ ಬೌಲರ್ ಮೊಹಮ್ಮದ್‌ ಆಮೀರ್‌ ಮತ್ತು ಆಸೀಫ್‌ ಆಲಿ ಅವರಿಗೆ ಮೀಸಲು ಸ್ಥಾನ ನೀಡಲಾಗಿದೆ. 

ಇಂಜಮಾಮ್ ಉಲ್‌ ಹಕ್‌ ನೇತೃತ್ವದ ಆಯ್ಕೆ ಸಮಿತಿಯು, ಚಾಂಪಿಯನ್ಸ್ ಟ್ರೋಫಿ ಮತ್ತು ವಿವಿಧ ತಂಡಗಳ ಎದುರು ಆಟಗಾರರು ತೋರಿರುವ ಆಧಾರದ ಮೇಲೆ ಸ್ಥಾನ ನೀಡಲಾಗಿದೆ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಲ್ಗೊಂಡಿದ್ದ 11 ಮಂದಿಗೆ ಮಣೆ ಹಾಕಲಾಗಿದ್ದು, ಇಬ್ಬರು ಮೀಸಲು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಅನುಭವಿಗಳಾದ ಶೋಯೆಬ್ ಮಲಿಕ್ ಮತ್ತು ಮಹಮದ್‌ ಹಫೀಜ್ ಅವರಿಗೆ ಸ್ಥಾನ ಕಲ್ಪಿಸಲಾಗಿದೆ.     

ವಿಶ್ವಕಪ್ ತಂಡ: ಸರ್ಫರಾಜ್‌ ಅಹ್ಮದ್‌ (ನಾಯಕ), ಫಕಾರ್ ಜಮಾನ್, ಇಮಾಮ್ ಉಲ್‌ ಹಕ್‌, ಅಬಿದ್‌ ಆಲಿ, ಬಾಬರ್‌ ಅಜಂ, ಶೋಯೆಬ್‌ ಮಲಿಕ್‌, ಹ್ಯಾರೀಸ್‌ ಸೋಹೆಲ್, ಮೊಹಮದ್‌ ಹಫೀಜ್‌, ಶಾದಬ್‌ ಖಾನ್‌, ಇಮಾದ್‌ ವಾಸಿಂ, ಹಸನ್‌ ಆಲಿ, ಫಾಹೀಂ ಅಶ್ರಫ್‌, ಶಹಯೀನ್ ಶಾ ಅಫ್ರಿಧಿ, ಜುನೈದ್‌ ಖಾನ್‌ ಮತ್ತು ಮೊಹಮ್ಮದ್‌ ಹಸ್ನೈನ್

ಮೀಸಲು ಆಟಗಾರರು: ಆಸೀಫ್‌ ಅಲಿ ಮತ್ತು ಮೊಹಮದ್‌ ಆಮೀರ್‌