113 ವರ್ಷದ ಹಿರಿಯಜ್ಜ ಮಸಾಜೊ ನೊನಾಕಾ ನಿಧನ

0
1015

ವಿಶ್ವದ ಅತಿ ಹಿರಿಯ ಪುರುಷ ಎಂಬ ಹೆಗ್ಗಳಿಕೆಯ 113 ವರ್ಷದ ಮಸಾಜೊ ನೊನಾಕಾ 2019 ಜನೇವರಿ 20 ರ ಭಾನುವಾರ ನಿಧನರಾದರು. ಜಪಾನ್​ನ ಉತ್ತರ ಭಾಗದ ದ್ವೀಪ ಹೊಕ್ಕಾಯಿಡೊದಲ್ಲಿನ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿರುವಾಗ ಅವರು ಮೃತಪಟ್ಟರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಟೋಕಿಯೊ : ವಿಶ್ವದ ಅತಿ ಹಿರಿಯ ಪುರುಷ ಎಂಬ ಹೆಗ್ಗಳಿಕೆಯ 113 ವರ್ಷದ ಮಸಾಜೊ ನೊನಾಕಾ  2019 ಜನೇವರಿ 20 ರ ಭಾನುವಾರ ನಿಧನರಾದರು. ಜಪಾನ್​ನ ಉತ್ತರ ಭಾಗದ ದ್ವೀಪ ಹೊಕ್ಕಾಯಿಡೊದಲ್ಲಿನ ತಮ್ಮ ನಿವಾಸದಲ್ಲಿ ನಿದ್ರೆಯಲ್ಲಿರುವಾಗ ಅವರು ಮೃತಪಟ್ಟರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ನಾಲ್ಕು ತಲೆಮಾರುಗಳನ್ನು ಮಸಾಜೊ ನೋಡಿದ್ದಾರೆ. 2018ರ ಏಪ್ರಿಲ್​ನಲ್ಲಿ ಗಿನ್ನೆಸ್ ವಿಶ್ವದಾಖಲೆಗೆ ಅವರನ್ನು ಪರಿಗಣಿಸಲಾಗಿತ್ತು. 1905ರ ಜು. 25ರಂದು ಜನಿಸಿದ್ದರು ಎಂದು ಮಸಾಜೊ ಮೊಮ್ಮಗಳು ಯುಕೊ ನೊನಾಕಾ ತಿಳಿಸಿದ್ದಾರೆ. ಮಸಾಜೊಗೆ ಯಾವುದೇ ರೀತಿಯ ಅನಾರೋಗ್ಯ ಇರಲಿಲ್ಲ. ಮಲಗಿದ್ದಲ್ಲಿಯೇ ಸುಖವಾಗಿ ಇಹಲೋಕ ತ್ಯಜಿಸಿದ್ದಾರೆ. ಮಸಾಜೊಗೆ ಏಳು ಮಂದಿ ಸಹೋದರ-ಸಹೋದರಿಯರಿದ್ದರು. ಅವರು ಯಾರೂ ಕೂಡ ಬದುಕಿಲ್ಲ. ಪತ್ನಿ ಹಾಗೂ ಐದು ಮಕ್ಕಳ ಸಾವನ್ನು ಕೂಡ ಮಸಾಜೊ ನೋಡಿದ್ದಾರೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

106 ವರ್ಷದ ಹೋಟೆಲ್: ಮಸಾಜೊ ಪಾಲಕರು ಹೋಟೆಲ್ ನಡೆಸುತ್ತಿದ್ದರು. ಬಳಿಕ ಅದರ ಉಸ್ತುವಾರಿಯನ್ನು ಅವರು ಹೊತ್ತರು. ಈಗ 106 ವರ್ಷ ಹಳೆಯ ಹೋಟೆಲ್ ಉಸ್ತುವಾರಿ ಮಸಾಜೊ ಮೊಮ್ಮಗಳು ಯುಕೊ ಹೊತ್ತಿದ್ದಾರೆ. ಜಪಾನ್​ನಲ್ಲಿ ಒಟ್ಟು 69,785 ಮಂದಿ 100 ವರ್ಷ ದಾಟಿದವರಿದ್ದಾರೆ. ಆ ಪೈಕಿ ಶೇ.90 ಮಹಿಳೆಯರಿದ್ದಾರೆ. ವಿಶ್ವದ ಅತಿ ಹಿರಿಯ ಮಹಿಳೆ ಎಂಬ ಖ್ಯಾತಿಯ ಕಾನೆ ತನಾಕಾ (116) ಜಪಾನ್​ನ ಕ್ಯುಶು ದ್ವೀಪದಲ್ಲಿದ್ದಾರೆ.