11ನೇ ಏಷ್ಯನ್ ಏರ್​ಗನ್ ಚಾಂಪಿಯನ್​ಷಿಪ್ : ಮನು-ಸೌರಭ್ ಜೋಡಿಗೆ ಸ್ವರ್ಣ

0
381

ಭಾರತದ ಯುವ ಶೂಟಿಂಗ್ ಸೆನ್ಸೇಷನ್​ಗಳಾದ ಮನು ಭಾಕರ್ ಹಾಗೂ ಸೌರಭ್ ಚೌಧರಿ, ಜೂನಿಯರ್ ವಿಭಾಗದ ವಿಶ್ವದಾಖಲೆಯನ್ನು ಮುರಿಯುವ ಮೂಲಕ 11ನೇ ಏಷ್ಯನ್ ಏರ್​ಗನ್ ಚಾಂಪಿಯನ್​ಷಿಪ್​ನಲ್ಲಿ ಮಿಶ್ರ ತಂಡ ವಿಭಾಗದ ಸ್ವರ್ಣ ಜಯಿಸಿದ್ದಾರೆ.

ಕುವೈತ್ ಸಿಟಿ: ಭಾರತದ ಯುವ ಶೂಟಿಂಗ್ ಸೆನ್ಸೇಷನ್​ಗಳಾದ ಮನು ಭಾಕರ್ ಹಾಗೂ ಸೌರಭ್ ಚೌಧರಿ, ಜೂನಿಯರ್ ವಿಭಾಗದ ವಿಶ್ವದಾಖಲೆಯನ್ನು ಮುರಿಯುವ ಮೂಲಕ 11ನೇ ಏಷ್ಯನ್ ಏರ್​ಗನ್ ಚಾಂಪಿಯನ್​ಷಿಪ್​ನಲ್ಲಿ ಮಿಶ್ರ ತಂಡ ವಿಭಾಗದ ಸ್ವರ್ಣ ಜಯಿಸಿದ್ದಾರೆ.

ನವೆಂಬರ್ 9 ರ ಶುಕ್ರವಾರ ನಡೆದ ಸ್ಪರ್ಧೆಯಲ್ಲಿ ಮನು ಹಾಗೂ ಸೌರಭ್ ಜೋಡಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ವಿಭಾಗದಲ್ಲಿ ಅಗ್ರಸ್ಥಾನ ಪಡೆಯಿತು. ಕೂಟದ ಕೊನೆಯ ದಿನದ ಸ್ಪರ್ಧೆಯಲ್ಲಿ ಭಾರತದ ಶೂಟಿಂಗ್ ಜೋಡಿ ಚೀನಾದ ವಾಂಗ್ ಕ್ಸಿಯಾವೋ ಹಾಗೂ ಹಾಂಗ್ ಶಿಕಿ ಜೋಡಿಯನ್ನು ಸೋಲಿಸಿ ಚಿನ್ನ ಗೆದ್ದಿತು. ಭಾರತದ ಜೂನಿಯರ್ ಶೂಟಿಂಗ್ ತಂಡ ಕೂಟದಲ್ಲಿ 4 ಸ್ವರ್ಣದೊಂದಿಗೆ 11 ಪದಕ ಸಾಧನೆ ಮಾಡಿತು. ಯುವ ಒಲಿಂಪಿಕ್ಸ್ ಗೇಮ್ಸ್ ಚಾಂಪಿಯನ್​ಗಳಾದ ಮನು ಹಾಗೂ ಸೌರಭ್, ವಿಶ್ವದಾಖಲೆಯ 485.4 ಅಂಕಕ್ಕೆ ಗುರಿ ಇಟ್ಟಿತು.

ನವೆಂಬರ್ 6 ರ ಮಂಗಳವಾರ ನಡೆದ 10ಮೀ ಏರ್ ಪಿಸ್ತೂಲ್ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಮೀರಠ್​ನ 16 ವರ್ಷದ ಶೂಟರ್ ಸೌರಭ್ ಚೌಧರಿ 239.8 ಅಂಕ ಸಂಪಾದಿಸಿ ಚಿನ್ನ ಜಯಿಸಿದರು.