1 ಲಕ್ಷ ಕಿ.ಮೀ. ಮೈಲಿಗಲ್ಲು ದಾಟಿದ ಸ್ವದೇಶಿ ನಿರ್ಮಿತ “ವಂದೇ ಭಾರತ್​ ಎಕ್ಸ್​ಪ್ರೆಸ್​”

0
22

ದೇಶೀಯವಾಗಿ ಅಭಿವೃದ್ಧಿಪಡಿಸಿರುವ ದೇಶದ ಅತ್ಯಂತ ವೇಗದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಒಂದೂ ಟ್ರಿಪ್​ ತಪ್ಪಿಸದೆ ಯಶಸ್ವಿಯಾಗಿ ಒಂದು ಲಕ್ಷ ಕಿ.ಮೀ. ಸಂಚರಿಸಿದೆ ಎಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿರುವ ದೇಶದ ಅತ್ಯಂತ ವೇಗದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಒಂದೂ ಟ್ರಿಪ್​ ತಪ್ಪಿಸದೆ ಯಶಸ್ವಿಯಾಗಿ ಒಂದು ಲಕ್ಷ ಕಿ.ಮೀ. ಸಂಚರಿಸಿದೆ ಎಂದು ಭಾರತೀಯ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ ಮತ್ತು ವಾರಾಣಸಿ ನಡುವೆ ಸಂಚರಿಸುವ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಫೆಬ್ರವರಿ 15 ರಂದು ಚಾಲನೆ ನೀಡಿದ್ದರು. ಅಂದಿನಿಂದ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ಒಂದೂ ಟ್ರಿಪ್​ ತಪ್ಪಿಸದೆ ನಿರಂತರವಾಗಿ ಮೂರು ತಿಂಗಳು ಸಂಚರಿಸಿದೆ. ಮೇ 15 ರ ಬುಧವಾರ ರೈಲು ಒಂದು ಲಕ್ಷ ಕಿ.ಮೀ. ಸಂಚರಿಸಿದ ದಾಖಲೆ ಬರೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆ. 15ರಂದು ಪರೀಕ್ಷಾರ್ಥ ಸಂಚಾರದ ವೇಳೆ ವಾರಾಣಸಿಯಿಂದ ವಾಪಸ್​ ಬರುವಾಗ ವಂದೇ ಭಾರತ್​ ಎಕ್ಸ್​ಪ್ರೆಸ್​ ರೈಲು ತಾಂತ್ರಿಕ ತೊಂದರೆ ಕಾಣಿಸಿಕೊಂಡಿತ್ತು. ಆ ನಂತರ ಫೆ. 17 ರಿಂದ ರೈಲು ವಾಣಿಜ್ಯ ಸಂಚಾರ ಆರಂಭಿಸಿತ್ತು. ಅಂದಿನಿಂದ ರೈಲಿನಲ್ಲಿ ಯಾವುದೇ ತಾಂತ್ರಿಕ ತೊಂದರೆಗಳು ಕಾಣಿಸಿಕೊಂಡಿಲ್ಲ. ರೈಲು ಎಲ್ಲೂ ಕೆಟ್ಟು ನಿಂತಿಲ್ಲ. ಶೀಘ್ರದಲ್ಲೇ ಶತಾಬ್ದಿ ಎಕ್ಸ್​ಪ್ರೆಸ್​ ರೈಲುಗಳ ಸ್ಥಾನವನ್ನು ವಂದೇ ಭಾರತ್​ ಎಕ್ಸ್​ಪ್ರೆಸ್​ ತುಂಬಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೈಸ್ಪೀಡ್​ ರೈಲು ವೈಫೈ, ಜಿಪಿಎಸ್​ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ಬಯೋ ವ್ಯಾಕ್ಯೂಮ್​ ಶೌಚಗೃಹ, ಎಲ್​ಇಡಿ ಲೈಟ್​ಗಳು, ಮೊಬೈಲ್​ ಚಾರ್ಜಿಂಗ್​ ಪಾಯಿಂಟ್​ಗಳು, ಕ್ಲೈಮೆಟ್​ ಕಂಟ್ರೋಲ್​ ವ್ಯವಸ್ಥೆ ಹಾಗೂ ಸ್ವಯಂ ಚಾಲಿತವಾಗಿ ತಾಪಮಾನ ನಿಯಂತ್ರಿಸುವ ವ್ಯವಸ್ಥೆ ಒಳಗೊಂಡಿದೆ. ಈ ರೈಲಿನಲ್ಲಿ ಒಟ್ಟು 16 ಬೋಗಿಗಳಿವೆ. 2 ಎಕ್ಸಿಕ್ಯೂಟಿವ್​ ಬೋಗಿಗಳಲ್ಲಿ ತಲಾ 52 ಸೀಟುಗಳು ಮತ್ತು ಉಳಿದ ಬೋಗಿಗಳಲ್ಲಿ 78 ಸೀಟುಗಳನ್ನು ಅಳವಡಿಸಲಾಗಿದೆ. ಎಕ್ಸಿಕ್ಯೂಟಿವ್​ ಬೋಗಿಗಳಲ್ಲಿ ತಿರುಗುವ ಕುರ್ಚಿಗಳಿದ್ದು, ರೈಲು ಚಲಿಸುವ ದಿಕ್ಕಿಗೆ ಕುರ್ಚಿಗಳನ್ನು ತಿರುಗಿಸಬಹುದಾಗಿದೆ.