1 ಕೋಟಿ ಮೀರಿದ ಮೋದಿ ಇನ್‌ಸ್ಟಾಗ್ರಾಮ್ ಬೆಂಬಲಿಗರ ಸಂಖ್ಯೆ

0
13

ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್‌ ಖಾತೆಯ ಬೆಂಬಲಿಗರ (ಫಾಲೋವರ್ಸ್‌) ಸಂಖ್ಯೆ 1 ಕೋಟಿ ಮೀರಿದೆ. ಈ ಮೂಲಕ ಮೊದಲ ಸ್ಥಾನ ಪಡೆದುಕೊಂಡ ನರೇಂದ್ರ ಮೋದಿ ಅವರು, ಹೆಚ್ಚು ಬೆಂಬಲಿಗರನ್ನು ಹೊಂದಿರುವ ಜಾಗತಿಕ ನಾಯಕ ಎಂದೆನಿಸಿಕೊಂಡಿದ್ದಾರೆ.

ಮೋದಿ ಇನ್‌ಸ್ಟಾಗ್ರಾಮ್‌ ಯಾರನ್ನೂ ಫಾಲೋ ಮಾಡುತ್ತಿಲ್ಲ. ಇದುವರೆಗೆ ವಿದೇಶ ಪ್ರವಾಸ, ಸಭೆ, ರಾಜಕೀಯ ಮುಖಂಡರ ಭೇಟಿ ಹೀಗೆ 150ಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೊಗಳು ಮೋದಿ ಇನ್‌ಸ್ಟಾಗ್ರಾಮ್‌ ಖಾತೆಯಿಂದ ಪೋಸ್ಟ್‌ ಆಗಿವೆ.

ನವೆಂಬರ್ 12, 2014ರಲ್ಲಿ ಇನ್‌ಸ್ಟಾಗ್ರಾಮ್ ಖಾತೆ ತೆರೆದ ಮೋದಿ ಅವರು, ಮ್ಯಾನ್ಮಾರ್‌ನಲ್ಲಿ ನಡೆದ 25ನೇ ಏಷಿಯನ್ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಚಿತ್ರವನ್ನು ಮೊದಲ ಭಾರಿ ಅಪ್‌ಲೋಡ್ ಮಾಡಿದ್ದರು.

ಕಳೆದ ವಾರ ಕೇದರಾನಾಥ್‌ಗೆ ಭೇಟಿ ನೀಡಿದ ಫೋಟೊವನ್ನು ಅಪ್‌ಲೋಡ್ ಮಾಡಿದ್ದು, 7 ಲಕ್ಷ 78ಸಾವಿರಕ್ಕೂ ಹೆಚ್ಚು ಲೈಕ್ ಸಿಕ್ಕಿದ್ದು, 4 ಸಾವಿರಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡಿದ್ದಾರೆ. 

ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಫಾಲೋವರ್ಸ್‌ ಹೊಂದಿರುವ ಜನ ನಾಯಕರ ಪೈಕಿ ಎರಡನೇ ಸ್ಥಾನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದ್ದಾರೆ. ಟ್ರಂಪ್‌ ಅವರ ಇನ್‌ಸ್ಟಾಗ್ರಾಮ್‌ ಖಾತೆಯನ್ನು 78 ಲಕ್ಷಕ್ಕೂ ಹೆಚ್ಚು ಮಂದಿ ಫಾಲೋ ಮಾಡುತ್ತಿದ್ದಾರೆ. ಟ್ರಂಪ್‌ ಖಾತೆಯಿಂದ ಈವರೆಗೆ 2 ಸಾವಿರಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೊಗಳು ಪೋಸ್ಟ್‌ ಆಗಿವೆ.

ಕ್ಯಾಥೊಲಿಕ್ ಚರ್ಚ್‌ನ ಪೋಪ್‌ ಫ್ರಾನ್ಸಿಸ್ ಇನ್‌ಸ್ಟಾಗ್ರಾಮ್‌ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದು, 49 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ. ಪೋಪ್‌ ಫ್ರಾನ್ಸಿಸ್‌ ಖಾತೆಯಿಂದ 450ಕ್ಕೂ ಹೆಚ್ಚು ಚಿತ್ರ ಹಾಗೂ ವಿಡಿಯೊಗಳು ಪೋಸ್ಟ್‌ ಆಗಿವೆ.