​ಆರ್‌ಬಿಐ : ರೆಪೋ ದರ ಬದಲಾವಣೆಯಿಲ್ಲ

0
727

ಅಕ್ಟೋಬರ್‌ ತಿಂಗಳ ಪಾಲಿಸಿ ಸಭೆಯಲ್ಲಿ ರೆಪೋ ದರ ಕುರಿತ ನಿರ್ಧಾರವನ್ನು ಪ್ರಕಟಿಸಿದ್ದು, ಪ್ರಸ್ತುತ ಇರುವ ದರವೇ ಮುಂದುವರಿಯಲಿದೆ. ಯಾವುದೇ ಬದಲಾವಣೆ ಇಲ್ಲ ಎಂದು ಆರ್‌ಬಿಐ ಹೇಳಿದೆ.

ಹೊಸದಿಲ್ಲಿ: ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಮತ್ತು ತೈಲ ಬೆಲೆ ನಿರಂತರ ಏರಿಕೆಯ ನಡುವೆಯೂ ಮಾರುಕಟ್ಟೆಯ ನಿರೀಕ್ಷೆಗಳಿಗೆ ವಿರುದ್ಧವಾಗಿ  ಆರ್‌ಬಿಐ ರೆಪೋ ದರವನ್ನು ಶೇ. 6.50 ರಲ್ಲೇ ಉಳಿಸಿಕೊಂಡಿದ್ದು, ಯಾವುದೇ ಬದಲಾವಣೆ ಮಾಡಿಲ್ಲ. 

ಅಕ್ಟೋಬರ್‌ ತಿಂಗಳ ಪಾಲಿಸಿ ಸಭೆಯಲ್ಲಿ ರೆಪೋ ದರ ಕುರಿತ ನಿರ್ಧಾರವನ್ನು ಪ್ರಕಟಿಸಿದ್ದು, ಪ್ರಸ್ತುತ ಇರುವ ದರವೇ ಮುಂದುವರಿಯಲಿದೆ. ಯಾವುದೇ ಬದಲಾವಣೆ ಇಲ್ಲ ಎಂದು ಆರ್‌ಬಿಐ ಹೇಳಿದೆ. 

ಮಾರುಕಟ್ಟೆ ತಜ್ಞರು ಕಚ್ಚಾ ತೈಲ ಬೆಲೆ ಏರಿಕೆ, ಷೇರು ಮಾರುಕಟ್ಟೆ ಕುಸಿತ, ಡಾಲರ್ ಮೌಲ್ಯ ಇಳಿಕೆಯಂತಹ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ರೆಪೋ ದರದಲ್ಲಿ ಏರಿಕೆಯಾಗಲಿದೆ ಎಂದು ಅಂದಾಜಿಸಿದ್ದರು. 

ಆದರೆ ಸಗಟು ಹಣದುಬ್ಬರ ಸಹಿತ ವಿವಿಧ ಕಾರಣಗಳಿಂದಾಗಿ ಆರ್‌ಬಿಐ ರೆಪೋ ದರದಲ್ಲಿ ಬದಲಾವಣೆ ಮಾಡಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಆರ್‌ಬಿಐ ಮುಂದೆ ಎರಡು ಆಯ್ಕೆಗಳಿದ್ದವು. ಮುಂದಿನ ಪಾಲಿಸಿ ಸಭೆಯಲ್ಲಿ ಬೆಲೆ ಏರಿಸುವುದು ಅಥವಾ ಅದನ್ನು ಯಥಾಸ್ಥಿತಿಯಲ್ಲಿರಿಸುವುದಾಗಿತ್ತು. 

ಹೀಗಾಗಿ ಆರ್‌ಬಿಐ ತಟಸ್ಥ ಧೋರಣೆ ಅನುಸರಿಸಿದೆ, ಆದರೆ ತಟಸ್ಥವಾಗಿರುವುದೆಂದರೆ ಮುಂದೆ ದರ ಕಡಿತದ ಸಾಧ್ಯತೆಯೂ ಇದೆ ಎಂದು ಆರ್‌ಬಿಐ ಗವರ್ನರ್ ಉರ್ಜಿತ್ ಪಟೇಲ್ ತಿಳಿಸಿದ್ದಾರೆ.