ಹ್ಯಾಮಿಲ್ಟನ್‌ ಚಾಂಪಿಯನ್‌

0
271

ಅಮೋಘ ಚಾಲನ ಕೌಶಲ ಮೆರೆದ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌, ಅಬುಧಾಬಿ ಗ್ರ್ಯಾನ್‌ ಪ್ರಿಕ್ಸ್‌ ಫಾರ್ಮುಲಾ–1 ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.

ಅಬುಧಾಬಿ (ಎಎಫ್‌ಪಿ): ಅಮೋಘ ಚಾಲನ ಕೌಶಲ ಮೆರೆದ ಬ್ರಿಟನ್‌ನ ಲೂಯಿಸ್‌ ಹ್ಯಾಮಿಲ್ಟನ್‌, ಅಬುಧಾಬಿ ಗ್ರ್ಯಾನ್‌ ಪ್ರಿಕ್ಸ್‌ ಫಾರ್ಮುಲಾ–1 ರೇಸ್‌ನಲ್ಲಿ ಚಾಂಪಿಯನ್‌ ಆಗಿದ್ದಾರೆ.

ಯಾಸ್‌ ಮರಿನಾ ಸರ್ಕ್ಯೂಟ್‌ನಲ್ಲಿ ನವೆಂವರ್ 25 ರ  ಭಾನುವಾರ ನಡೆದ ರೇಸ್‌ನಲ್ಲಿ ಮರ್ಸಿಡೀಸ್‌ ತಂಡದ ಹ್ಯಾಮಿಲ್ಟನ್‌ ಮೋಡಿ ಮಾಡಿದರು. 305 ಕಿ.ಮೀ. ದೂರವನ್ನು 1 ಗಂಟೆ 39 ನಿಮಿಷ 40. 382 ಸೆಕೆಂಡುಗಳಲ್ಲಿ ಕ್ರಮಿಸಿದರು.

ಈ ಗೆಲುವಿನೊಂದಿಗೆ ಹ್ಯಾಮಿ ಲ್ಟನ್‌, ಒಟ್ಟು ಪಾಯಿಂಟ್ಸ್‌ ಅನ್ನು 408ಕ್ಕೆ ಹೆಚ್ಚಿಸಿಕೊಂಡು ವಿಶ್ವ ಚಾಂಪಿ ಯನ್‌ಷಿಪ್‌ನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡರು. 33 ವರ್ಷ ವಯಸ್ಸಿನ ಹ್ಯಾಮಿಲ್ಟನ್‌, ಈ ಋತುವಿನಲ್ಲಿ ಗೆದ್ದ 11ನೇ ಪ್ರಶಸ್ತಿ ಇದು.

ಫೆರಾರಿ ತಂಡದ ಸೆಬಾಸ್ಟಿಯನ್‌ ವೆಟಲ್‌ ಎರಡನೇಯವರಾಗಿ ಗುರಿ ಮುಟ್ಟಿದರು. ರೆಡ್‌ಬುಲ್‌ ತಂಡದ ಚಾಲಕ, ನೆದರ್ಲೆಂಡ್ಸ್‌ನ ಮ್ಯಾಕ್ಸ್‌ ವರ್ಸ್ಟಾಪನ್‌ ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ರೆಡ್‌ಬುಲ್‌ ತಂಡದ ಡೇನಿಯಲ್‌ ರಿಕಿಯಾರ್ಡೊ ನಾಲ್ಕನೇ ಸ್ಥಾನ ಗಳಿಸಿದರು.