ಹ್ಯಾಂಡ್​ ಶೇಕ್​ ಚಾಲೆಂಜ್​ ಪ್ರಾರಂಭಿಸಿದ್ರು ಪವರ್​ಸ್ಟಾರ್ ಪುನೀತ್​​!

0
32

ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಮೇಲೆ ಒಂದರಂತೆ ಚಾಲೆಂಜ್​ಗಳದ್ದೇ ಹವಾ. ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ… ಹರಾ ಹೈ ತೋ ಬರಾ ಹೈ… ಕಿರಿಕ್​ ಎನ್ನಿಸಿಕೊಂಡ ಕಿಕಿ… ಬಳಿಕ ಈಗ ಪುನೀತ್​ ರಾಜ್​ಕುಮಾರ್​ ಮತ್ತೊಂದು ಹೊಸ ಚಾಲೆಂಜ್​ ಪ್ರಾರಂಭಿಸಿದ್ದಾರೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಮೇಲೆ ಒಂದರಂತೆ ಚಾಲೆಂಜ್​ಗಳದ್ದೇ ಹವಾ. ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ… ಹರಾ ಹೈ ತೋ ಬರಾ ಹೈ… ಕಿರಿಕ್​ ಎನ್ನಿಸಿಕೊಂಡ ಕಿಕಿ… ಬಳಿಕ ಈಗ ಪುನೀತ್​ ರಾಜ್​ಕುಮಾರ್​ ಮತ್ತೊಂದು ಹೊಸ ಚಾಲೆಂಜ್​ ಪ್ರಾರಂಭಿಸಿದ್ದಾರೆ.

ಅದೇನಪ್ಪ ಎಂದರೆ ಹ್ಯಾಂಡ್​ ಶೇಕ್​ ಚಾಲೆಂಜ್. ಗಟ್ಟಿಯಾಗಿ ಹ್ಯಾಂಡ್​ ಶೇಕ್ ಮಾಡುವುದರಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ. ನಮ್ಮ ಸ್ನೇಹಿತರ ಕೈಯನ್ನು ದೃಢವಾಗಿ ಕುಲುಕಿ ನೋಡಿ ಆತ್ಮವಿಶ್ವಾಸ ಗಟ್ಟಿಯಾಗುತ್ತದೆ. ನಿಮ್ಮ ನಿಮ್ಮ ಸ್ನೇಹಿತರಿಗೆ ಶೇಕ್​ ಹ್ಯಾಂಡ್​ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ಎಂದು ಚಾಲೆಂಜ್​ ಮಾಡಿದ್ದಾರೆ.
ಅಪ್ಪು ತಾವು ಹ್ಯಾಂಡ್​ ಶೇಕ್​ ಮಾಡುತ್ತಿರುವ ಫೋಟವನ್ನು ಫೇಸ್​ಬುಕ್​ನಲ್ಲಿ ಹಾಕುವ ಮೂಲಕ ಈ ಸವಾಲನ್ನು ರಕ್ಷಿತ್​ ಶೆಟ್ಟಿ, ಸಂತೋಷ್​ ಆನಂದ್​ ರಾಮ್​, ಡ್ಯಾನಿಷ್​ ಸೇಠ್ ಅವರಿಗೆ ನೀಡಿದ್ದಾರೆ.

ಫಿಟ್​ನೆಸ್​ ಚಾಲೆಂಜ್​ಗೆ ಕೇಂದ್ರ ಸಚಿವರ ಮುನ್ನುಡಿ

ಈ ಹಿಂದೆ ಕೇಂದ್ರ ಸಚಿವ ರಾಜವರ್ಧನ್​ ರಾಥೋಡ್​ ಹಮ್​ ಫಿಟ್​ ಹೈ ತೋ ಇಂಡಿಯಾ ಫಿಟ್​ ಹೈ ಅನ್ನೋ ಬರಹದಡಿ ಫಿಟ್​ನೆಸ್​ ಚಾಲೆಂಜ್​ ಪ್ರಾರಂಭಿಸಿದ್ದರು. ಅದಕ್ಕೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಅದನ್ನು ಸ್ವೀಕರಿಸಿದ್ದ ಪ್ರಧಾನಿ ತಮ್ಮ ಯೋಗ, ಫಿಟ್​ನೆಸ್​ ವಿಡಿಯೋ ವೈರಲ್​ ಮಾಡಿದ್ದರು.

ಹಸಿರು ಸವಾಲು…

ನಂತರ ಆಂಧ್ರಪ್ರದೇಶದ ಖಾಸಗಿ ಸಂಸ್ಥೆಯೊಂದು ಹರಾ ಹೈ ತೋ ಬರಾ ಹೈ ಎನ್ನುವ ಹಸಿರು ಸವಾಲು ಕೊಟ್ಟಿತ್ತು. ಮೂರು ಸಸಿಗಳನ್ನು ನೆಟ್ಟು ಮೂರು ವರ್ಷ ಅದರ ಆರೈಕೆ ಮಾಡಬೇಕು ಎಂಬುದು ಚಾಲೆಂಜ್​ ಆಗಿತ್ತು.

ವ್ಯಾಪಕ ಕಿರಿಕಿರಿಯ ಸವಾಲು

ಇನ್ನು ಜಗತ್ತಿಗೇ ಕಿರಿಕಿರಿ ಕೊಟ್ಟು ಈಗ ನಿಷೇಧದ ಹಣೆಪಟ್ಟಿ ಹೊತ್ತ ಕಿಕಿ ದೊಡ್ಡ ಅವಾಂತರವನ್ನೇ ಸೃಷ್ಟಿಸಿತ್ತು. ಚಲಿಸುವ ಕಾರಿನ ಬಾಗಿಲು ತೆಗೆದು ಇಂಗ್ಲಿಷ್ ಹಾಡಿಗೆ ವಿಭಿನ್ನವಾಗಿ ಹೆಜ್ಜೆ ಹಾಕುವುದು ಕಿಕಿ ವಿಶೇಷ. ಸೆಲೆಬ್ರಿಟಿಗಳಿಂದ ಆರಂಭವಾದ ಈ ಕ್ರೇಜ್​ ಸಾಮಾನ್ಯರಿಗೂ ಹಬ್ಬಿತ್ತೂ. ರಸ್ತೆಯಲ್ಲಿ ಮಾಡುವ ಈ ಕಸರತ್ತಿನಿಂದ ಸಾವು ನೋವುಗಳೂ ಸಂಭವಿಸಿವೆ.
ಇದೀಗ ಪುನೀತ್​ ಒಂದು ಸ್ನೇಹಮಯ ಚಾಲೆಂಜ್​ನ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅದೆಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.