ಹೊಸ 20 ರೂಪಾಯಿ ಮೌಲ್ಯದ ನಾಣ್ಯ ಬಿಡುಗಡೆ ಮಾಡಿದ ಸರ್ಕಾರ: 27 ಮಿ.ಮೀ. ವ್ಯಾಸದ ನಾಣ್ಯ ಹೇಗಿದೆ ಗೊತ್ತಾ?

0
1062

ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ 20 ರೂಪಾಯಿ ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ಬಿಡುಗಡೆ ಮಾಡಿದೆ. 10 ರೂಪಾಯಿ ಮೌಲ್ಯದ ನಾಣ್ಯಗಳು ನಕಲಿಯಾಗಿದೆ ಎಂಬ ಭೀತಿಯಲ್ಲಿ ಅದನ್ನು ಸ್ವೀಕರಿಸಲು ಸಾರ್ವಜನಿಕರು ಭಯಪಡುತ್ತಿರುವಾಗಲೇ ಕೇಂದ್ರ ಸರ್ಕಾರ 20 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ.

ನವದೆಹಲಿ: ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ 20 ರೂಪಾಯಿ ಮುಖಬೆಲೆಯ ನಾಣ್ಯವನ್ನು ಚಲಾವಣೆಗೆ ಬಿಡುಗಡೆ ಮಾಡಿದೆ. 10 ರೂಪಾಯಿ ಮೌಲ್ಯದ ನಾಣ್ಯಗಳು ನಕಲಿಯಾಗಿದೆ ಎಂಬ ಭೀತಿಯಲ್ಲಿ ಅದನ್ನು ಸ್ವೀಕರಿಸಲು ಸಾರ್ವಜನಿಕರು ಭಯಪಡುತ್ತಿರುವಾಗಲೇ ಕೇಂದ್ರ ಸರ್ಕಾರ 20 ರೂಪಾಯಿ ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡುತ್ತಿದೆ.

ಹೊಸ ನಾಣ್ಯದ ಬಿಡುಗಡೆ ಕುರಿತು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ 20 ರೂಪಾಯಿ ನಾಣ್ಯ 12 ತುದಿಗಳನ್ನು ಹೊಂದಿರುವ ಬಹುಭುಜಾಕೃತಿಯ ಆಕಾರವನ್ನು ಹೊಂದಿರುತ್ತದೆ. ಇದರ ಹೊರಭಾಗದ ವ್ಯಾಸ 27 ಮಿ.ಮೀ. ಇರಲಿದೆ. 8.54 ಗ್ರಾಮ ಭಾರವಿರುವ ಈ ನಾಣ್ಯದ ಶೇ.65 ಭಾಗ ತಾಮ್ರವಾಗಿದ್ದು, ಶೇ.15 ಭಾಗ ಜಿಂಕ್​ ಮತ್ತು ಶೇ.20 ನಿಕಲ್​ ಲೋಹದಿಂದ ಕೂಡಿರುತ್ತದೆ.

ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ನಾಣ್ಯದ ಮಧ್ಯಭಾಗ ಶೇ.75 ಭಾಗ ತಾಮ್ರದಿಂದ ಮಾಡಲ್ಪಟ್ಟಿದ್ದರೆ ಶೇ.20 ಭಾಗ ಜಿಂಕ್​ ಅನ್ನು ಒಳಗೊಂಡಿರುತ್ತದೆ. ನಿಕಲ್​ ಶೇ.5 ಭಾಗವಿರುತ್ತದೆ.

ಅಂಧರಿಗಾಗಿ ಹೊಸ ನಾಣ್ಯ: ಹೊಸದಾದ 20 ರೂಪಾಯಿ ಮೌಲ್ಯದ ನಾಣ್ಯಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಂಧರಿಗೆ ಅನುಕೂಲವಾಗುವ 1, 2, 5, 10 ಮತ್ತು 20 ರೂಪಾಯಿ ಮೌಲ್ಯದ ಹೊಸ ನಾಣ್ಯಗಳನ್ನೂ ಬಿಡುಗಡೆ ಮಾಡಿದರು. ಅಂಧರಿಗಾಗಿ ಬಿಡುಗಡೆ ಮಾಡಲಾಗಿರುವ ಎಲ್ಲ ನಾಣ್ಯಗಳು ದುಂಡನೆ ಆಕಾರದಲ್ಲಿವೆ.

ಹೊಸ 20 ರೂಪಾಯಿ ನಾಣ್ಯದ ವಿವರ
ನಾಣ್ಯದ ಮುಮ್ಮುಖದಲ್ಲಿ ನಾಲ್ಕು ಸಿಂಹಗಳ ರಾಷ್ಟ್ರೀಯ ಲಾಂಛನ, ಅದರಡಿಯಲ್ಲಿ ಸತ್ಯಮೇವ ಜಯತೆ ಎಂಬ ವಾಕ್ಯ ಇರುತ್ತದೆ. ಇದರ ಎಡಭಾಗದಲ್ಲಿ ಭಾರತ ಎಂದು ಹಿಂದಿಯಲ್ಲಿ ಬಲಭಾಗದಲ್ಲಿ ಇಂಡಿಯಾ ಎಂದು  ಇಂಗ್ಲಿಷ್​ನಲ್ಲಿ ಬರೆಯಲ್ಪಟ್ಟಿರುತ್ತದೆ.
ನಾಣ್ಯದ ಹಿಮ್ಮುಖದಲ್ಲಿ 20 ರೂ. ಅಂಕಿ, ಇದರ ಶಿರೋಭಾಗದಲ್ಲಿ ರೂಪಾಯಿ ಚಿಹ್ನೆ, ಎಡಭಾಗದಲ್ಲಿ ಆಹಾರಧಾನ್ಯಗಳ ಚಿಹ್ನೆ, ಬಲಭಾಗದಲ್ಲಿ ಟ್ವೆಂಟಿ ರುಪೀಸ್​ ಎಂಬ ಇಂಗ್ಲಿಷ್​ ಬರಹ, ಇದರಡಿಯಲ್ಲಿ ನಾಣ್ಯವನ್ನು ಟಂಕಿಸಿದ ವರ್ಷದ ವಿವರಗಳು ಇರಲಿವೆ. (ಏಜೆನ್ಸೀಸ್​)