ಹೊಸ ದಾಖಲೆ: 10 ಲಕ್ಷ ಕೋಟಿ ರೂ. ಆದಾಯ ತೆರಿಗೆ ಸಂಗ್ರಹ

0
917

2017-18ನೇ ಸಾಲಿನಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದ ಅಂದರೆ, 10.03 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಆಗಸ್ಟ್ 17 ರ ಶುಕ್ರವಾರ ಹೇಳಿದೆ.

ಗುವಾಹಟಿ: 2017-18ನೇ ಸಾಲಿನಲ್ಲಿ ದೇಶದಲ್ಲಿ ದಾಖಲೆ ಪ್ರಮಾಣದ ಅಂದರೆ, 10.03 ಲಕ್ಷ ಕೋಟಿ ರೂ. ಆದಾಯ ತೆರಿಗೆಯನ್ನು ಸಂಗ್ರಹಿಸಲಾಗಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಆಗಸ್ಟ್ 17 ರ ಶುಕ್ರವಾರ ಹೇಳಿದೆ. 

ಆದಾಯ ತೆರಿಗೆ ಇಲಾಖೆಯ ಆಡಳಿತಾಧಿಕಾರಿಗಳ ಎರಡು ದಿನಗಳ ಸಮ್ಮೇಳನದಲ್ಲಿ ಮಾತನಾಡಿದ ಸಿಬಿಡಿಟಿ ಸದಸ್ಯ ಎಸ್‌. ಭಟ್ಟಸಾಲಿ, 2017-18ನೇ ಸಾಲಿನಲ್ಲಿ ದಾಖಲೆ ಪ್ರಮಾಣದಲ್ಲಿ 6.92 ಕೋಟಿ ಐಟಿ ರಿಟರ್ನ್ಸ್‌ ದಾಖಲಾಗಿವೆ. 2016-17ರಲ್ಲಿ ಕೇವಲ 1.31 ಕೋಟಿ ಜನರಷ್ಟೇ ರಿಟರ್ನ್ಸ್‌ ದಾಖಲಿಸಿದ್ದರು. 

ಪ್ರಸಕ್ತ ವರ್ಷ ತನ್ನ ಆದಾಯ ತೆರಿಗೆ ಜಾಲಕ್ಕೆ ಹೆಚ್ಚುವರಿಯಾಗಿ 1.25 ಕೋಟಿ ಹೊಸ ಐಟಿಆರ್‌ ದಾಖಲುದಾರರನ್ನು ಸೇರಿಸುವ ಗುರಿಯನ್ನು ಐ-ಟಿ ಇಲಾಖೆ ಹೊಂದಿದೆ ಎಂದು ಅವರು ತಿಳಿಸಿದ್ದಾರೆ.