ಹೈದರಾಬಾದ್ ವಿಜ್ಞಾನಿಗೆ ಅಮೆರಿಕದ ಪ್ರತಿಷ್ಠಿತ ಶಿಷ್ಯವೇತನ

0
274

ಹೈದರಾಬಾದ್‌ನ ವಿಜ್ಞಾನಿ ಡಾ.ರಾಜೀವ್ ಕೆ. ವರ್ಶ್ನೆ ಅವರಿಗೆ ಬೆಳೆ ಉತ್ಪಾದನೆ ಮತ್ತು ಮಣ್ಣು ನಿರ್ವಹಣೆ ಕುರಿತ ಅಮೆರಿಕದ ಸಂಸ್ಥೆ (ಎಎಸ್‌ಎ) 2018ನೇ ಸಾಲಿನ ಪ್ರತಿಷ್ಠಿತ ಶಿಷ್ಯವೇತನ ನೀಡಿ ಗೌರವಿಸಿದೆ.

ಬಾಲ್ಟಿಮೋರ್ (ಅಮೆರಿಕ):ಹೈದರಾಬಾದ್‌ನ ವಿಜ್ಞಾನಿ ಡಾ.ರಾಜೀವ್ ಕೆ. ವರ್ಶ್ನೆ ಅವರಿಗೆ ಬೆಳೆ ಉತ್ಪಾದನೆ ಮತ್ತು ಮಣ್ಣು ನಿರ್ವಹಣೆ ಕುರಿತ ಅಮೆರಿಕದ ಸಂಸ್ಥೆ (ಎಎಸ್‌ಎ) 2018ನೇ ಸಾಲಿನ ಪ್ರತಿಷ್ಠಿತ ಶಿಷ್ಯವೇತನ ನೀಡಿ ಗೌರವಿಸಿದೆ. 

ಬೆಳೆಗಳ ಉತ್ಪಾದನೆ ಸುಧಾರಣೆಗಾಗಿ ತಳಿಗಳ ಗುಣಮಟ್ಟ ಹೆಚ್ಚಿಸಲು ನಡೆಸಿದ ಸಂಶೋಧನೆಗಾಗಿ ಅವರಿಗೆ ಈ ಗೌರವ ಸಂದಿದೆ. ಅವರು ಈ ಗೌರವಕ್ಕೆ ಭಾಜನರಾಗಿರುವ ಮೊದಲ ಭಾರತೀಯರಾಗಿದ್ದಾರೆ ಮತ್ತು ಈ ಬಾರಿ ಶಿಷ್ಯವೇತನ ಪಡೆದ ಮೂವರು ಅಮೆರಿಕೇತರ ವಿಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ.

ವರ್ಶ್ನೆ ಅವರು ಒಣಹವೆ ‍ಪ್ರದೇಶಗಳಲ್ಲಿ ಕೃಷಿ ಅಭಿವೃದ್ಧಿಗಾಗಿ ಸಂಶೋಧನೆ ನಡೆಸುವ ಅಂತರರಾಷ್ಟ್ರೀಯ ಬೆಳೆ ಸಂಶೋಧನಾ ಸಂಸ್ಥೆಯಲ್ಲಿ (ಐಸಿಆರ್‌ಐಎಸ್‌ಎಟಿ) ಸಂಶೋಧನಾ ನಿರ್ದೇಶಕ
ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.