ಹೃದಯ ಶಸ್ತ್ರಚಿಕಿತ್ಸೆ: ಪಾಕ್ ಹಾಕಿಪಟು ಮನ್ಸೂರ್ ನಿಧನ

0
17

ಪಾಕಿಸ್ತಾನ ಹಾಕಿ ತಂಡದ ಹಿರಿಯ ಗೋಲ್‌ಕೀಪರ್ ಮನ್ಸೂರ್ ಅಹಮದ್ (49)ಅವರು 2018 ಮೇ 12 ರ ಶನಿವಾರ ನಿಧನರಾದರು.

ಕರಾಚಿ: ಪಾಕಿಸ್ತಾನ ಹಾಕಿ ತಂಡದ ಹಿರಿಯ ಗೋಲ್‌ಕೀಪರ್ ಮನ್ಸೂರ್ ಅಹಮದ್ (49)ಅವರು 2018 ಮೇ 12 ರ  ಶನಿವಾರ ನಿಧನರಾದರು.

ಅವರು ಬಹಳ ದಿನಗಳಿಂದ ಹೃದ್ರೋಗದಿಂದ ಬಳಲುತ್ತಿದ್ದರು. ಕರಾಚಿಯ ಸಿಟಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1994ರಲ್ಲಿ ವಿಶ್ವಕಪ್‌ ಗೆದ್ದಿದ್ದ ಪಾಕಿಸ್ತಾನ ಹಾಕಿ ತಂಡದಲ್ಲಿ ಅವರು ಗೋಲ್‌ಕೀಪರ್ ಆಗಿದ್ದರು.

ಕೆಲವು ವಾರಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗಾಗಿ ಭಾರತಕ್ಕೆ ತೆರಳುವ ಇಂಗಿತ ವ್ಯಕ್ತಪಡಿಸಿದ್ದರು.