ಹುವೈಗೆ ಗೂಗಲ್ ಆಘಾತ ಆಂಡ್ರಾಯ್ಡ್​ ಲೈಸನ್ಸ್ ರದ್ದು

0
32

ಅಮೆರಿಕದ ಗೂಗಲ್ ಕಂಪನಿ ಚೀನಾದ ಹುವೈ ಸಂಸ್ಥೆ ಜತೆಗಿನ ವ್ಯವಹಾರವನ್ನು ಅಂತ್ಯಗೊಳಿಸಿದೆ. ಮಾತ್ರವಲ್ಲದೆ,,ಆಂಡ್ರಾಯ್ಡ್ ಲೈಸನ್ಸ್ ಅನ್ನೂ ರದ್ದು ಮಾಡಿದೆ. ಇದರಿಂದ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಿಕಾ ಸಂಸ್ಥೆಯಾದ ಹುವೈಗೆ ಬಲುದೊಡ್ಡ ಪೆಟ್ಟು ಬಿದ್ದಿದೆ.

ವಾಷಿಂಗ್ಟನ್: ಅಮೆರಿಕದ ಗೂಗಲ್ ಕಂಪನಿ ಚೀನಾದ ಹುವೈ ಸಂಸ್ಥೆ ಜತೆಗಿನ ವ್ಯವಹಾರವನ್ನು ಅಂತ್ಯಗೊಳಿಸಿದೆ. ಮಾತ್ರವಲ್ಲದೆ, ಆಂಡ್ರಾಯ್ಡ್ ಲೈಸನ್ಸ್ ಅನ್ನೂ ರದ್ದು ಮಾಡಿದೆ. ಇದರಿಂದ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್​ಫೋನ್ ತಯಾರಿಕಾ ಸಂಸ್ಥೆಯಾದ ಹುವೈಗೆ ಬಲುದೊಡ್ಡ ಪೆಟ್ಟು ಬಿದ್ದಿದೆ.

ಅಮೆರಿಕ- ಚೀನಾ ವಾಣಿಜ್ಯ ಸಮರದ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಹುವೈ ಕಂಪನಿಯನ್ನು ಎಂಟಿಟಿ ಪಟ್ಟಿಗೆ (ಕಪ್ಪುಪಟ್ಟಿಗೆ) ಸೇರಿಸಿರುವುದರಿಂದ ಅಮೆರಿಕದ ಕಂಪನಿಗಳು ಹುವೈ ಜತೆ ವ್ಯವಹಾರ ನಡೆಸುವುದಕ್ಕೆ ನಿರ್ಬಂಧವಿದೆ. ಹೀಗಾಗಿ ಗೂಗಲ್ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಹುವೈಗೆ ಹಾರ್ಡ್​ವೇರ್, ಸಾಫ್ಟ್​ವೇರ್ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸುವುದಿಲ್ಲ ಎಂದು ಗೂಗಲ್ ಹೇಳಿದೆ.

ಗೂಗಲ್ ವಾಣಿಜ್ಯ ಲೈಸನ್ಸ್ ಇಲ್ಲದ ಹೊರತು ಜಿಮೇಲ್, ಗೂಗಲ್ ಕ್ರೋಮ್ ಯುಟ್ಯೂಬ್ ಆಪ್ ಬಳಸಲು ಸಾಧ್ಯವಾಗುವುದಿಲ್ಲ.

ಗೂಗಲ್ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಹುವೈ ಕಂಪನಿ, ಆಂಡ್ರಾಯ್್ಡ ಅಭಿವೃದ್ಧಿಗೆ ತಾನೂ ಮಹತ್ವದ ಕೊಡುಗೆ ನೀಡಿದ್ದು, ಗ್ರಾಹಕರಿಗೆ ಭದ್ರತಾ ಅಪ್​ಡೇಟ್ ಮತ್ತು ಇನ್ನಿತರ ಸೇವೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಹೇಳಿದೆ. ಮೂಲಗಳ ಪ್ರಕಾರ, ಗೂಗಲ್ ಮೇಲಿನ ಅವಲಂಬನೆ ತಪ್ಪಿಸಲು ಹುವೈ ಈಗಾಗಲೇ ಇನ್ನೊಂದು ಯೋಜನೆ ಸಿದ್ಧಪಡಿಸಿಕೊಂಡಿದ್ದು, ತನ್ನದೇ ಆಪರೇಟಿಂಗ್ ಸಿಸ್ಟಮ್ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿದೆ ಎನ್ನಲಾಗಿದೆ.

ಹುವೈ ವಿರುದ್ಧ ಕ್ರಮ ಸರ್ಕಾರಕ್ಕೆ ಬಿಟ್ಟ ವಿಚಾರ

ಹುವೈ ಕಂಪನಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ನಿರ್ಧರಿಸಬೇಕು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೇಳಿದೆ. ಗೂಗಲ್ ಆಂಡ್ರಾಯ್ಡ್ ಲೈಸನ್ಸ್ ರದ್ದು ಮಾಡಿದೆ. ಹೀಗಾಗಿ ಭಾರತ ಕೂಡ ಹುವೈ ವಿರುದ್ಧ ನಿರ್ಬಂಧ ವಿಧಿಸಲಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಟ್ರಾಯ್ ಅಧ್ಯಕ್ಷ ಶರ್ವ, ಇಂಥ ತೀರ್ವನವನ್ನು ಸರ್ಕಾರ ಕೈಗೊಳ್ಳಬೇಕು ಎಂದಿದ್ದಾರೆ.