ಹುಲಿ, ಖಡ್ಗಮೃಗ ಅಂಗಾಂಗ ಮಾರಾಟಕ್ಕೆ ಚೀನಾ ನಿಷೇಧ ತೆರವು: ಭಾರತ ಆತಂಕ

0
217

‘ಪ್ರಾಣಿಗಳ ಅಂಗಾಂಗಗಳ ವ್ಯಾಪಾರದ ಮೇಲೆ 25 ವರ್ಷಗಳಿಂದ ವಿಧಿಸಲಾಗಿದ್ದ ನಿಷೇಧವನ್ನು ಚೀನಾ ತೆಗೆದುಹಾಕಿದೆ. ಇದರಿಂದ, ಭಾರತದಲ್ಲಿ ಹುಲಿ ಮತ್ತು ಖಡ್ಗಮೃಗಗಳ ಬೇಟೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚೀನಾಕ್ಕೆ ತನ್ನ ಕಳಕಳಿಯನ್ನು ಮನದಟ್ಟು ಮಾಡಬೇಕು’ ಎಂದು ಭಾರತದ ವನ್ಯಜೀವಿ ತಜ್ಞರು ಮನವಿ ಮಾಡಿದ್ದಾರೆ.

ನವದೆಹಲಿ (ಪಿಟಿಐ): ‘ಪ್ರಾಣಿಗಳ ಅಂಗಾಂಗಗಳ ವ್ಯಾಪಾರದ ಮೇಲೆ 25 ವರ್ಷಗಳಿಂದ ವಿಧಿಸಲಾಗಿದ್ದ ನಿಷೇಧವನ್ನು ಚೀನಾ ತೆಗೆದುಹಾಕಿದೆ. ಇದರಿಂದ, ಭಾರತದಲ್ಲಿ ಹುಲಿ ಮತ್ತು ಖಡ್ಗಮೃಗಗಳ ಬೇಟೆ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರವು ಅಂತರರಾಷ್ಟ್ರೀಯ ವೇದಿಕೆಯಲ್ಲಿ ಚೀನಾಕ್ಕೆ ತನ್ನ ಕಳಕಳಿಯನ್ನು ಮನದಟ್ಟು ಮಾಡಬೇಕು’ ಎಂದು ಭಾರತದ ವನ್ಯಜೀವಿ ತಜ್ಞರು ಮನವಿ ಮಾಡಿದ್ದಾರೆ.

ಮಾಧ್ಯಮ ವರದಿಗಳ ಪ್ರಕಾರ, ಚೀನಾದಲ್ಲಿ ವೈದ್ಯಕೀಯ ಉದ್ದೇಶಕ್ಕೆ ಹುಲಿ ಮೂಳೆ ಮತ್ತು ಖಡ್ಗಮೃಗದ ಕೊಂಬಿನ ಬಳಕೆ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ಭಾಗಶಃ ತೆಗೆಯಲಾಗಿದೆ. ಅಳಿವಿನಂಚಿನಲ್ಲಿರುವ ಜೀವಿಗಳನ್ನು ಉಳಿಸಲು 1993ರಿಂದ ಈ ನಿಷೇಧ ಹೇರಲಾಗಿತ್ತು.

‘ಚೀನಾದ ಈ ನಿರ್ಧಾರದಿಂದ ವಿಶ್ವದಾದ್ಯಂತ ಹುಲಿ ಮತ್ತು ಖಡ್ಗಮೃಗಗಳ ಜೀವಕ್ಕೆ ಅಪಾಯ ಎದುರಾಗಲಿದೆ’ ಎಂದು ಡಬ್ಲ್ಯುಡಬ್ಲ್ಯುಎಫ್‌ ಸಚಿವಾಲಯದ ನಿರ್ದೇಶಕ ದೀಪಂಕರ್‌ ಘೋಷ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಗಳ ಪ್ರಕಾರ, ಭಾರತದಲ್ಲಿ 2,226 ಹುಲಿಗಳು, ನೇಪಾಳ ಮತ್ತು ಭಾರತ ಸೇರಿ 3,500 ಖಡ್ಗಮೃಗಗಳು ಇವೆ.