ಹುಬ್ಬಳ್ಳಿ : ದೇಶದಲ್ಲಿಯೇ ಅತ್ಯಂತ ದೊಡ್ಡ ತಾಲ್ಲೂಕು ನ್ಯಾಯಾಲಯ ಉದ್ಘಾಟನೆ

0
28

122 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐದು ಮಹಡಿ ಇರುವ ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಇದಾಗಿದೆ. ದೇಶದಲ್ಲಿಯೇ ಇದು ಅತಿ ದೊಡ್ಡ ತಾಲ್ಲೂಕು ನ್ಯಾಯಾಲಯವಾಗಿದೆ. ಇಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯು ಇದೆ.

ಹುಬ್ಬಳ್ಳಿ: ನ್ಯಾಯಾಲಯಗಳಿಗೆ ಮೂಲಸೌಕರ್ಯ ಕಲ್ಪಿಸುವ ವಿಷಯ ಬಂದಾಗ ಸರ್ಕಾರ ಹಣಕಾಸಿನ ಕೊರತೆ ಇದೆ ಎಂದು ಹೇಳಬಾರದು” ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಹುಬ್ಬಳ್ಳಿಯ ನೂತನ ನ್ಯಾಯಾಲಯ ಸಂಕೀರ್ಣವನ್ನು ಆಗಸ್ಟ್ 12 ರಂದು ಉದ್ಘಾಟಿಸಿ ಮಾತನಾಡಿದರು. ಆ ಪ್ರಕ್ರಿಯೆ ಮುಂದುವರಿಯುತ್ತಿರಬೇಕು. ಲಭ್ಯ ಇರುವ ನೂತನ ತಂತ್ರಜ್ಞಾನವನ್ನು ಸಹ ಅಳವಡಿಸಬೇಕು. ಈ ವಿಷಯದಲ್ಲಿ ಹಿಂದೆ ಬೀಳಬಾರದು. ಒಟ್ಟಾರೆ ನ್ಯಾಯಾಂಗದ ಪ್ರಸ್ತಾವನೆಗಳಿಗೆ ಕಾರ್ಯಾಂಗ ಇಲ್ಲ ಎಂದು ಹೇಳಬಾರದು ಎಂದು ತಿಳಿಸಿದರು.

ಕಟ್ಟಡ ಅಥವಾ ಬೇರೆ ಯಾವುದೇ ಸೌಲಭ್ಯಗಳಿರಲಿ ಅವುಗಳು ಗುಣಮಟ್ಟದಿಂದ ಕೂಡಿರಬೇಕೇ ವಿನಃ ಸಾಂಕೇಟಿಕವಾಗಿರಬಾರದು. ನ್ಯಾಯಾಲಯಕ್ಕೆ ಬರುವ ವಕೀಲರು, ಕಕ್ಷಿದಾರರಿಗೆ ತಾವು ಪವಿತ್ರ ಸ್ಥಳದಲ್ಲಿದ್ದೇವೆ ಎಂಬ ಭಾವನೆ ಬರಬೇಕು ಎಂದು ಅವರು ಹೇಳಿದರು

ಅತಿ ದೊಡ್ಡ ತಾಲ್ಲೂಕು ನ್ಯಾಯಾಲಯ

122 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಐದು ಮಹಡಿ ಇರುವ ತಾಲ್ಲೂಕು ನ್ಯಾಯಾಲಯ ಸಂಕೀರ್ಣ ಇದಾಗಿದೆ. ದೇಶದಲ್ಲಿಯೇ ಇದು ಅತಿ ದೊಡ್ಡ ತಾಲ್ಲೂಕು ನ್ಯಾಯಾಲಯವಾಗಿದೆ. ಇಲ್ಲಿ ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆಯು ಇದೆ.