ಹುಬ್ಬಳ್ಳಿಯಲ್ಲಿ ಆಧಾರ್‌ ಸೇವಾ ಕೇಂದ್ರ

0
518

ರಾಜ್ಯದ ಹುಬ್ಬಳ್ಳಿ ಸೇರಿ ದೇಶದ 53 ನಗರಗಳಲ್ಲಿ ಆಧಾರ್‌ ಸೇವಾ ಕೇಂದ್ರಗಳನ್ನು ಆರಂಭಿಸಲು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ₹300 ಕೋಟಿಯಿಂದ ₹400 ಕೊಟಿ ಅಂದಾಜು ವೆಚ್ಚದ ಯೋಜನೆ ರೂಪಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ನವದೆಹಲಿ (ಪಿಟಿಐ): ರಾಜ್ಯದ ಹುಬ್ಬಳ್ಳಿ ಸೇರಿ ದೇಶದ 53 ನಗರಗಳಲ್ಲಿ ಆಧಾರ್‌ ಸೇವಾ ಕೇಂದ್ರಗಳನ್ನು ಆರಂಭಿಸಲು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) 300 ಕೋಟಿಯಿಂದ 400 ಕೊಟಿ ಅಂದಾಜು ವೆಚ್ಚದ ಯೋಜನೆ ರೂಪಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಂತೆ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಆಧಾರ್‌ ನೋಂದಣಿ, ತಿದ್ದುಪಡಿ, ಬದಲಾವಣೆ ಸೇರಿ ಇತರೆ ಚಟುವಟಿಕೆ ನಡೆಸಲಿವೆ. ಬ್ಯಾಂಕು, ಅಂಚೆ ಕಚೇರಿ, ಸರ್ಕಾರಿ ಕಚೇರಿಗಳ ಆವರಣದಲ್ಲಿ ಈಗಿರುವ 30,000 ಕೇಂದ್ರಗಳ ಜೊತೆಗೆ ಈ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೆಟ್ರೋ ನಗರಗಳಲ್ಲಿ ತಲಾ ನಾಲ್ಕು ಹಾಗೂ ಉಳಿದ ನಗರಗಳಲ್ಲಿ ತಲಾ ಎರಡು ಕೇಂದ್ರಗಳನ್ನು ಆರಂಭಿಸಲಾಗುವುದು. 2019ರ ಏಪ್ರಿಲ್‌ ತಿಂಗಳಿನಿಂದ ಈ ಸೇವಾ ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಪ್ರತಿನಿತ್ಯ ನಾಲ್ಕು ಲಕ್ಷ ಜನರು ಆಧಾರ್‌ ಮಾಹಿತಿಯ ತಿದ್ದುಪಡಿ, ವಿಳಾಸ ಬದಲಾವಣೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ನಿತ್ಯ ಒಂದು ಲಕ್ಷ ಮಂದಿ ಆಧಾರ್‌ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.