ಹುಟ್ಟೂರಿನ 2000 ಕುಟುಂಬಗಳಿಗೆ ತಲಾ 10 ಲಕ್ಷ ರೂ. ನೆರವು ಘೋಷಿಸಿದ ತೆಲಂಗಾಣ ಸಿಎಂ ಚಂದ್ರಶೇಖರ್​ ರಾವ್​

0
33

ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್​ ರಾವ್​ ಅವರು ತಮ್ಮ ಹುಟ್ಟೂರು ಸಿದ್ದಿಪೇಟ್​ ಜಿಲ್ಲೆಯ ಚಿಂತಾಮಡಕ ಗ್ರಾಮದಲ್ಲಿ ವಾಸಿಸುತ್ತಿರುವ 2000 ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಸಿದ್ದಿಪೇಟ್​ (ತೆಲಂಗಾಣ): ತೆಲಂಗಾಣದ ಸಿಎಂ ಕೆ. ಚಂದ್ರಶೇಖರ್​ ರಾವ್​ ಅವರು ತಮ್ಮ ಹುಟ್ಟೂರು ಸಿದ್ದಿಪೇಟ್​ ಜಿಲ್ಲೆಯ ಚಿಂತಾಮಡಕ ಗ್ರಾಮದಲ್ಲಿ ವಾಸಿಸುತ್ತಿರುವ 2000 ಕುಟುಂಬಗಳಿಗೆ ಸರ್ಕಾರದ ವತಿಯಿಂದ ತಲಾ 10 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ.

ಚಿಂತಾಮಡಕ ಗ್ರಾಮದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಚಂದ್ರಶೇಖರ್​ ರಾವ್​ ನಾನು ಈ ಗ್ರಾಮದಲ್ಲಿ ಜನಿಸಿದ್ದೇನೆ. ಹಾಗಾಗಿ ಈ ಗ್ರಾಮದ ಜನರಿಗೆ ನೆರವು ನೀಡಬೇಕಾದುದು ನನ್ನ ಧರ್ಮ. ಇಂದು ನಾನು ಇಲ್ಲಿ ವಾಸಿಸುತ್ತಿರುವ ಪ್ರತಿಯೊಂದು ಕುಟುಂಬಕ್ಕೂ 10 ಲಕ್ಷ ರೂ. ನೀಡಲಾಗುವುದು, ಅವರು ಆ ಹಣವನ್ನು, ಯಾವುದೇ ಉದ್ದೇಶಕ್ಕೆ ಬಳಸಿಕೊಳ್ಳಬಹುದು. ಉದಾ. ಟ್ರ್ಯಾಕ್ಟರ್​, ಕೃಷಿ ಭೂಮಿ, ಕೃಷಿ ಯಂತ್ರೋಪಕರಣಗಳು ಮುಂದಾವುಗಳನ್ನು ಕೊಳ್ಳಲು ಬಳಸಿಕೊಳ್ಳಬಹುದು. ಈ ಯೋಜನೆಯಿಂದ ಗ್ರಾಮದ 2000 ಕುಟುಂಬಗಳಿಗೆ ಅನುಕೂಲವಾಗಿದೆ. ತಕ್ಷಣವೇ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಕುಟುಂಬಗಳಿಗೂ ಪಕ್ಕಾ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಮತ್ತು ಒಳಚರಂಡಿ ನಿರ್ಮಿಸಲು ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳನ್ನು 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಚಿಂತಾಮಡಕ ಗ್ರಾಮವನ್ನು ರಾಜ್ಯದಲ್ಲೇ ಮಾದರಿಯಾಗಿ ಪರಿವರ್ತಿಸಲಾಗುವುದು. 6 ತಿಂಗಳ ಬಳಿಕ ಗ್ರಾಮಕ್ಕೆ ಆಗಮಿಸಿ ಪೂರ್ಣಗೊಂಡಿರುವ ಯೋಜನೆಗಳನ್ನು ಉದ್ಘಾಟಿಸುವುದಾಗಿ ಸಿಎಂ ತಿಳಿಸಿದ್ದಾರೆ.