ಹಿರಿಯ ಯೋಗ ಶಿಕ್ಷಕಿ, ಯೋಗಪಟು “ವಿ. ನಾನಮ್ಮಾಳ್” ವಿಧಿವಶ

0
70

ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ, ಯೋಗ ಪಟು ವಿ. ನಾನಮ್ಮಾಳ್ (99) ಅಕ್ಟೋಬರ್ 26 ರ ಶನಿವಾರ ನಿಧನರಾದರು.

ಕೊಯಮತ್ತೂರ್: ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ, ಯೋಗ ಪಟು ವಿ. ನಾನಮ್ಮಾಳ್ (99) ಅಕ್ಟೋಬರ್ 26 ರ   ಶನಿವಾರ ನಿಧನರಾದರು.

ಅವರು ವರು ಕೊಯಮತ್ತೂರು ಬಳಿಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು  ಅವರ ಕುಟುಂಬ ಮೂಲಗಳು ತಿಳಿಸಿವೆ.

“ಯೋಗ ಅಜ್ಜಿ” ಎಂದೇ ಖ್ಯಾತವಾಗಿದ್ದ 99 ವರ್ಷದ ನಾನಮ್ಮಾಳ್ ವಾರದ ಹಿಂದೆ ಮಂಚದಿಂದ ಬಿದ್ದಿದ್ದರು. ಅಂದಿನಿಂದ ಅವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.
 
ನಾನಮ್ಮಾಳ್ ಲಕ್ಷಾಂತರ ಜನರಿಗೆ ಯೋಗ ಶಿಕ್ಷಣ ನೀಡುವ ಮೂಲಕ ಸದೃಢ ಆರೋಗ್ಯವಂತ ಜೀವನ ಮಾದರಿಯನ್ನು ಬೋಧಿಸಿದ್ದರು. ಇವರು ಉತ್ತಮ ಯೋಗ ಪಟುವಾಗಿದ್ದು ಯೂಟ್ಯೂಬ್ ಚಾನಲ್ ಮೂಲಕ ತಮ್ಮದೇ ಶೈಲಿಯಲ್ಲಿ ಯೋಗ ಪ್ರಚಾರ ಕಾರ್ಯ ನಡೆಸಿದ್ದರು. ಇವರು ಸಾಂಪ್ರದಾಯಿಕ ಉಡುಗೆ ಸೀರೆಯನ್ನುಟ್ಟು ಯೋಗ ಮಾಡುವುದನ್ನು ನೋಡಲು ಅದ್ಭುತವಾಗಿತ್ತು.
 
ಇವರ ಯೋಗ ಪಾಂಡಿತ್ಯ, ಸಾಮಾಜಿಕ ಕಳಕಳಿಯ ಯೋಗ ಶಿಕ್ಷಣ ಸೇವೆಯನ್ನು ಮನ್ನಿಸಿ ಭಾರತ ಸರ್ಕಾರ 2018ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಅಲ್ಲದೆ 2016 ನಾರಿ ಶಕ್ತಿ ಪುರಾಸ್ಕರ್ ಝಾಗೂ 2017 ರಲ್ಲಿ ಕರ್ನಾಟಕ ಸರ್ಕಾರದಿಂದ  ಯೋಗ ರತ್ನ ಪ್ರಶಸ್ತಿಗಳು ಲಭಿಸಿದ್ದವು.
 
ನಾನಮ್ಮಾಳ್ 45 ವರ್ಷಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದು, ಪ್ರತಿದಿನ ಸುಮಾರು 100 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದರು.ಕೊಯಮತ್ತೂರಿನಲ್ಲಿ ಯೋಗ ಕೇಂದ್ರ ನಡೆಸುತ್ತಿರುವ ತಮ್ಮ  ಇಬ್ಬರು ಗಂಡು ಮಕ್ಕಳನ್ನು ಮೃತರು ಅಗಲಿದ್ದಾರೆ.