ಹಿರಿಯ ನಟಿ ಗೀತಾ ಕಪೂರ್‌ ನಿಧನ

0
25

ಅಂಧೇರಿಯ ವೃದ್ಧಾಶ್ರಮದಲ್ಲಿ ಹಿರಿಯ ನಟಿ ಗೀತಾ ಕಪೂರ್ (57) ಶನಿವಾರ ನಿಧನರಾದರು. ಇವರನ್ನು ಮಗ ದೂರ ಮಾಡಿದ್ದರು ಇದೇ ಕೊರಗಿನಲ್ಲಿ ಅಸ್ವಸ್ಥರಾಗಿದ್ದರು.

ಅಂಧೇರಿಯ ವೃದ್ಧಾಶ್ರಮದಲ್ಲಿ ಹಿರಿಯ ನಟಿ ಗೀತಾ ಕಪೂರ್ (57) ಶನಿವಾರ ನಿಧನರಾದರು. ಇವರನ್ನು ಮಗ ದೂರ ಮಾಡಿದ್ದರು ಇದೇ ಕೊರಗಿನಲ್ಲಿ ಅಸ್ವಸ್ಥರಾಗಿದ್ದರು.

‘ಪಾಕೀಝಾ’, ‘ರಝಿಯಾ ಸುಲ್ತಾನ್’ ಸೇರಿ ನೂರಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಗೀತಾ ಅಭಿನಯಿಸಿದ್ದಾರೆ.

2017 ಏಪ್ರಿಲ್‌ನಲ್ಲಿ ರಕ್ತದೊತ್ತಡದಿಂದ ಬಳಲುತ್ತಿದ್ದ ಗೀತಾ ಅವರನ್ನು ಗೋರೆಗಾಂವ್‌ನ ಎಸ್‌ಆರ್‌ವಿ ಆಸ್ಪತ್ರೆಗೆ ಮಗ ರಾಜಾ ದಾಖಲಿಸಿದ್ದರು. ನಂತರ ಎಟಿಎಂನಿಂದ ಹಣ ತರುವುದಾಗಿ ಹೋದ ಅವರ ಮಗ ಮರಳಿ ಬಂದಿರಲೇ ಇಲ್ಲ. ನಂತರ ಗೀತಾ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಲಾಗಿತ್ತು.