ಹಿಮಾಲಯ ಔಷಧಿ ಕಂಪನಿಗೆ ಕೊಹ್ಲಿ, ಪಂತ್‌ ರಾಯಭಾರಿಗಳು

0
36

ಹಿಮಾಲಯ ಔಷಧಿ ಕಂಪನಿಯ ತನ್ನ ಉತ್ಪನ್ನಗಳಿಗೆ ‌ನೂತನ ರಾಯಭಾರಿಗಳನ್ನು ಹೆಸರಿಸಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉದಯೋನ್ಮುಖ ಆಟಗಾರ ರಿಷಭ್‌ ಪಂತ್‌ ಕಂಪನಿಯ ‘ಮೆನ್ಸ್‌ ಫೇಸ್‌ ಕೇರ್‌ ರೇಂಜ್‌‌’ ಹೆಸರಿನ ಉತ್ಪನ್ನದ ಕುರಿತು ಪ್ರಚಾರ ನಡೆಸಲಿದ್ದಾರೆ.

ಬೆಂಗಳೂರು(ಪಿಟಿಐ): ಹಿಮಾಲಯ ಔಷಧಿ ಕಂಪನಿಯ ತನ್ನ ಉತ್ಪನ್ನಗಳಿಗೆ ‌ನೂತನ ರಾಯಭಾರಿಗಳನ್ನು ಹೆಸರಿಸಿದೆ. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉದಯೋನ್ಮುಖ ಆಟಗಾರ ರಿಷಭ್‌ ಪಂತ್‌ ಕಂಪನಿಯ ‘ಮೆನ್ಸ್‌ ಫೇಸ್‌ ಕೇರ್‌ ರೇಂಜ್‌‌’ ಹೆಸರಿನ ಉತ್ಪನ್ನದ ಕುರಿತು ಪ್ರಚಾರ ನಡೆಸಲಿದ್ದಾರೆ.

ಒಪ್ಪಂದದ ಕುರಿತು ಮಾತನಾಡಿರುವ ವಿರಾಟ್‌ ಕೊಹ್ಲಿ, ’ಹಿಮಾಲಯ ತಂಡದ ಭಾಗವಾಗುತ್ತಿರುವುದಕ್ಕೆ ಸಂತೋಷವಾಗುತ್ತಿದೆ.  ಹಲವು ವರ್ಷಗಳಿಂದ ಹಿಮಾಲಯ ಉತ್ಪನ್ನಗಳ ಗ್ರಾಹಕನಾಗಿದ್ದೇನೆ’ ಎಂದಿದ್ದಾರೆ.

ರಿಷಭ್‌ ಪಂತ್‌ ಪ್ರತಿಕ್ರಿಯಿಸಿ ‘ಹಿಮಾಲಯ ಕಂಪೆನಿಯು ಸುಮಾರು 88 ವರ್ಷಗಳಿಗಿಂತ ಅಧಿಕ ಕಾಲ ಜನರ ಬದುಕನ್ನು ಸುಖಮಯ ಹಾಗೂ ಆರೋಗ್ಯಮಯವಾಗಿಸಿದೆ. ಕಂಪನಿಯ ರಾಯಭಾರಿಯಾರಿಯಾಗಿರುವುದಕ್ಕೆ ಹೆಮ್ಮೆಯಾಗುತ್ತಿದೆ ಎಂದು ನುಡಿದರು
ಹಿಮಾಲಯ ಹರ್ಬಲ್ ಹೆಲ್ತ್ ಕೇರ್ “ಔಷಧಿ, ವೈಯಕ್ತಿಕ ಆರೈಕೆ, ಮಗುವಿನ ಆರೈಕೆ, ಯೋಗಕ್ಷೇಮ, ಪೌಷ್ಠಿಕಾಂಶ ಮತ್ತು ಪ್ರಾಣಿ ಆರೋಗ್ಯ ಉತ್ಪನ್ನಗಳನ್ನು” ಒಳಗೊಂಡಿರುವ ಅತ್ಯಂತ ವ್ಯಾಪಕವಾದ ಉತ್ಪನ್ನಗಳನ್ನು ಹೊಂದಿದೆ. ನೀಮ್ ಫೇಸ್ ವಾಶ್ ಅವರ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಉತ್ಪನ್ನಗಳಲ್ಲಿ ಒಂದಾಗಿದೆ. ಭಾರತದ ಪ್ರಾಚೀನ ಆಯುರ್ವೇದ ಔಷಧಿಗಳ ವ್ಯವಸ್ಥೆಗಳಲ್ಲಿ ವ್ಯಾಪಕ ಸಂಶೋಧನೆ ಮತ್ತು ಅಭಿವೃದ್ಧಿಗೆ 2016 ರಲ್ಲಿ ಮದರ್ ಕೇರ್ ಉತ್ಪನ್ನಗಳನ್ನು ಪ್ರಾರಂಭಿಸಲಾಗಿದೆ. ಕಂಪನಿಯು 92 ರಾಷ್ಟ್ರಗಳಲ್ಲಿ ಉಪಸ್ಥಿತಿಯನ್ನು ಹೊಂದಿದೆ.
 
# ಹಿಮಾಲಯ ಔಷಧಿ ಕಂಪನಿಯ ಸ್ಥಾಪನೆ : 1930
 
# ಹಿಮಾಲಯ ಔಷಧಿ ಕಂಪನಿಯ ಕೇಂದ್ರ ಕಚೇರಿ : ಬೆಂಗಳೂರು