ಹಿಮಾಚಲಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಎಲ್. ನಾರಾಯಣಸ್ವಾಮಿ ನೇಮಕ

0
13

ಕರ್ನಾಟಕ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಬೆಂಗಳೂರು: ಕರ್ನಾಟಕ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಅವರನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ರಾಷ್ಟ್ರಪತಿಗಳ ಅನುಮೋದನೆ ಮೇರೆಗೆ ಕಾನೂನು ಮತ್ತು ನ್ಯಾಯ ಸಚಿವಾಲಯ ಅಕ್ಟೋಬರ್ 3 ರ ಗುರುವಾರ ಆದೇಶ ಹೊರಡಿಸಿದೆ. ಸಿಜೆಐ ರಂಜನ್ ಗೊಗೊಯ್ ನೇತೃತ್ವದ ಕೊಲಿಜಿಯಂ ಆಗಸ್ಟ್.28ರಂದು ಎಲ್. ನಾರಾಯಣ ಸ್ವಾಮಿ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

ಹಿನ್ನೆಲೆ: ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಎಲ್.ನಾರಾಯಣಸ್ವಾಮಿ, 1959ರ ಜು.1ರಂದು ಜನಿಸಿದರು.1987ರಲ್ಲಿ ಹೈಕೋರ್ಟ್​ನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದ ಅವರು, 1995ರಿಂದ 99ರವರೆಗೆ ಸರ್ಕಾರಿ ಪ್ಲೀಡರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. 2007ರ ಜುಲೈ 4ರಂದು ಹೈಕೋರ್ಟ್​ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡ ಅವರು, 2009ರ ಏ.18ರಂದು ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಹಿಂದಿನ ಸಿಜೆ ದಿನೇಶ್ ಮಹೇಶ್ವರಿ ಸುಪ್ರೀಂಕೋರ್ಟ್​ಗೆ ಪದನ್ನೋತಿ ಹೊಂದಿದ ಹಿನ್ನೆಲೆಯಲ್ಲಿ 2019ರ ಜ.17ರಿಂದ ಮೇ 9ರವರೆಗೆ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದರು.