ಹಿಮಾಚಲಪ್ರದೇಶಕ್ಕೆ ನೂತನ ರಾಜ್ಯಪಾಲ “ಕಲ್​ರಾಜ್ ಮಿಶ್ರಾ”

0
91

ಕೇಂದ್ರದ ಮಾಜಿ ಸಚಿವ ಕಲ್​ರಾಜ್ ಮಿಶ್ರಾರನ್ನು ಹಿಮಾಚಲಪ್ರದೇಶದ 19 ನೇ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ಗವರ್ನರ್ ಆಗಿದ್ದ ಆಚಾರ್ಯ ದೇವವ್ರತ್​ರನ್ನು ಗುಜರಾತ್​ಗೆ ವರ್ಗಾವಣೆ ಮಾಡಲಾಗಿದೆ.

ನವದೆಹಲಿ: ಕೇಂದ್ರದ ಮಾಜಿ ಸಚಿವ ಕಲ್​ರಾಜ್ ಮಿಶ್ರಾರನ್ನು ಹಿಮಾಚಲಪ್ರದೇಶದ 19 ನೇ ನೂತನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಹಿಮಾಚಲ ಪ್ರದೇಶದ ಗವರ್ನರ್ ಆಗಿದ್ದ ಆಚಾರ್ಯ ದೇವವ್ರತ್​ರನ್ನು ಗುಜರಾತ್​ಗೆ ವರ್ಗಾವಣೆ ಮಾಡಲಾಗಿದೆ.

ಗುಜರಾತ್​ನ ಗವರ್ನರ್ ಆಗಿದ್ದ ಓಂ ಪ್ರಕಾಶ್ ಕೊಹ್ಲಿ ಸ್ಥಾನಕ್ಕೆ ದೇವವ್ರತ್​ನ್ನು ಆಯ್ಕೆ ಮಾಡಲಾಗಿದ್ದು, ಕೊಹ್ಲಿಗೆ ಹೊಸದಾಗಿ ಯಾವ ಜವಾಬ್ದಾರಿ ವಹಿಸಲಾಗಿದೆ ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಬಿಜೆಪಿಯ ವರಿಷ್ಠ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಕಲ್​ರಾಜ್, 16ನೇ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದ ದೇವರಿಯ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದರು.

ಕಲ್​ರಾಜ್ ಮಿಶ್ರಾ ಅವರು 2014-2019ರವರೆಗೆ ಸೂಕ್ಷ್ಮ,ಲಘು ಮತ್ತು ಮಧ್ಯಮ ಕೈಗಾರಿಕೆ ಖಾತೆಯ ಸ್ವತಂತ್ರ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವಯಸ್ಸಿನ ಕಾರಣದಿಂದ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದರು.