ಹಿಂದೂಗಳ ಕ್ಷಮೆ ಕೋರಿದ ರಿಪಬ್ಲಿಕನ್‌ ಪಕ್ಷ

0
521

ವಿಘ್ನ ನಿವಾರಕ ಗಣೇಶನನ್ನು ದಿನಪತ್ರಿಕೆಯೊಂದರ ಜಾಹೀರಾತಿನಲ್ಲಿ ಆಕ್ಷೇಪಾರ್ಹವಾಗಿ ಚಿತ್ರಿಸಿದ್ದ ಅಮೆರಿಕದ ಟೆಕ್ಸಾಸ್‌ ರಾಜ್ಯದ ಅಡಳಿತರೂಢ ರಿಪಬ್ಲಿಕನ್‌ ಪಕ್ಷವು ಹಿಂದೂಗಳ ಕ್ಷಮೆಯಾಚಿಸಿದೆ.

ಹ್ಯೂಸ್ಟನ್‌: ವಿಘ್ನ ನಿವಾರಕ ಗಣೇಶನನ್ನು ದಿನಪತ್ರಿಕೆಯೊಂದರ ಜಾಹೀರಾತಿನಲ್ಲಿ ಆಕ್ಷೇಪಾರ್ಹವಾಗಿ ಚಿತ್ರಿಸಿದ್ದ ಅಮೆರಿಕದ ಟೆಕ್ಸಾಸ್‌ ರಾಜ್ಯದ ಅಡಳಿತರೂಢ ರಿಪಬ್ಲಿಕನ್‌ ಪಕ್ಷವು ಹಿಂದೂಗಳ ಕ್ಷಮೆಯಾಚಿಸಿದೆ. 
ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ರಿಪಬ್ಲಿಕನ್‌ ಪಕ್ಷವು ಜಾಹೀರಾತೊಂದನ್ನು ನೀಡಿತ್ತು. ಇದರಲ್ಲಿ ಗಣೇಶನ ಮೂರ್ತಿಯನ್ನು ಬಳಸಿಕೊಂಡು ಆನೆಯನ್ನು ರಿಪಬ್ಲಿಕನ್‌ ಪಕ್ಷವೆಂದು, ಕತ್ತೆಯನ್ನು ಡೆಮಾಕ್ರಟಿಕ್‌ ಪಕ್ಷ ಎಂಬಂತೆ ಚಿತ್ರಿಸಲಾಗಿತ್ತು. ಜತೆಗೆ ”ನೀವು ಆನೆಯನ್ನು ಪೂಜಿಸುತ್ತೀರೋ? ಕತ್ತೆಯನ್ನು ಪೂಜಿಸುತ್ತೀರೋ? ಆಯ್ಕೆ ನಿಮಗೆ ಬಿಟ್ಟಿದ್ದು,” ಎಂದು ಬರೆಯಲಾಗಿತ್ತು. ”ರಾಜಕೀಯಕ್ಕಾಗಿ ಗಣೇಶನ ಚಿತ್ರವನ್ನು ಬಳಸಿ, ಆಕ್ಷೇಪಾರ್ಹವಾಗಿ ಚಿತ್ರಿಸಿದ್ದುಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸಿದೆ. ಇದಕ್ಕಾಗಿ ಪಕ್ಷ ಕ್ಷಮೆ ಕೋರಬೇಕು,” ಎಂದು ಹ್ಯೂಸ್ಟನ್‌ನ ಹಿಂದೂ ಅಮೆರಿಕನ್‌ ಫೌಂಡೇಶನ್‌(ಎಚ್‌ಎಎಫ್‌) ಆಗ್ರಹಿಸಿತ್ತು. ನಂತರ ಎಚ್ಚೆತ್ತ ರಿಪಬ್ಲಿಕನ್‌ ಪಕ್ಷ ಪುನಃ ಜಾಹೀರಾತು ನೀಡಿ ಹಿಂದೂಗಳ ಕ್ಷಮೆ ಕೋರಿದೆ.