ಹಿಂದಿ ಕವಯತ್ರಿ “ಮಹಾದೇವಿ ವರ್ಮಾ” ಗೆ “ಗೂಗಲ್ ಡೂಡಲ್‌” ಗೌರವ

0
65

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿಂದಿ ಕವಯತ್ರಿ ಮಹಾದೇವಿ ವರ್ಮಾ ಅವರಿಗೆ ಗೂಗಲ್‌ ಡೂಡಲ್‌ ಗೌರವ ನೀಡಿದೆ.

ನವದೆಹಲಿ: ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿಂದಿ ಕವಯತ್ರಿ ಮಹಾದೇವಿ ವರ್ಮಾ ಅವರಿಗೆ ಗೂಗಲ್‌ ಡೂಡಲ್‌ ಗೌರವ ನೀಡಿದೆ.

ಗ್ರಾಮೀಣ ಪ್ರದೇಶದಲ್ಲಿ ಮರವೊಂದರ ಕೆಳಗೆ ಮಹಾದೇವಿ ಅವರು ಲೇಖನಿ ಹಿಡಿದು ಬರೆಯುತ್ತಿರುವ ಚಿತ್ರವನ್ನು ಗೂಗಲ್‌ ಪ್ರಕಟಿಸಿದೆ.

ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ 1982ರಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಆ ದಿನದ ನೆನಪಿಗಾಗಿ ಗೂಗಲ್‌ ಈ ಗೌರವ ನೀಡಿದೆ. ಕಲಾವಿದೆ ಸೋನಾಲಿ ಜೋಹ್ರಾ ಅವರು ಈ ಕಲಾಕೃತಿಯನ್ನು ರಚಿಸಿದ್ದಾರೆ.

ಮಹಾದೇವಿ ಅವರನ್ನು ಹಿಂದಿ ಸಾಹಿತ್ಯದ ಛಾಯಾವಾದಿ ಚಳವಳಿಯ ಸ್ಥಾಪಕ ಕವಯತ್ರಿಯಾಗಿ ಗುರುತಿಸಲಾಗುತ್ತಿದೆ.