ಹಾರ್ವರ್ಡ್‌ ವಿ.ವಿ ವಿದ್ಯಾರ್ಥಿ ಸಂಘಕ್ಕೆ ಶ್ರುತಿ ಅಧ್ಯಕ್ಷೆ

0
263

ಹಾರ್ವರ್ಡ್‌ ಯೂನಿವರ್ಸಿಟಿಯಲ್ಲಿ ಅತ್ಯಂತ ಪ್ರಭಾವಶಾಲಿ ಸಂಘಟನೆಯಾದ ಪದವಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯಾಗಿ, ಅಮೆರಿಕದಲ್ಲಿರುವ ಭಾರತೀಯ ಮೂಲದವರಾದ, 20ರ ಹರೆಯದ ಶ್ರುತಿ ಪಳನಿಯಪ್ಪನ್‌ ಆಯ್ಕೆಯಾಗಿದ್ದಾರೆ.

ವಾಷಿಂಗ್ಟನ್‌ (ಪಿಟಿಐ): ಹಾರ್ವರ್ಡ್‌ ಯೂನಿವರ್ಸಿಟಿಯಲ್ಲಿ ಅತ್ಯಂತ ಪ್ರಭಾವಶಾಲಿ ಸಂಘಟನೆಯಾದ ಪದವಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷೆಯಾಗಿ, ಅಮೆರಿಕದಲ್ಲಿರುವ ಭಾರತೀಯ ಮೂಲದವರಾದ, 20ರ ಹರೆಯದ ಶ್ರುತಿ ಪಳನಿಯಪ್ಪನ್‌ ಆಯ್ಕೆಯಾಗಿದ್ದಾರೆ.

ಅವರ ಸಹಪಾಠಿ, ಜೂಲಿಯಾ ಹೂಸಾ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಶ್ರುತಿ ಅವರ ಪೋಷಕರು 1992ರಲ್ಲಿ ಚೆನ್ನೈನಿಂದ ಅಮೆರಿಕಕ್ಕೆ ವಲಸೆ ಬಂದವರು. 2016ರ ಜುಲೈನಲ್ಲಿ ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರಟಿಕ್‌ ರಾಷ್ಟ್ರೀಯ ಸಮಾವೇಶದಲ್ಲಿ ಅತ್ಯಂತ ಕಿರಿಯ ಪ್ರತಿನಿಧಿಯಾಗಿ ಶ್ರುತಿ ಭಾಗವಹಿಸಿದ್ದರು. ಸದ್ಯ ಅವರು, ವಿದ್ಯಾರ್ಥಿ ಕೌನ್ಸಿಲ್‌ನ ಶಿಕ್ಷಣ ಸಮಿತಿ ಅಧ್ಯಕ್ಷೆಯಾಗಿದ್ದಾರೆ.