ಹಾರ್ದಿಕ್ ಪಟೇಲ್‌ಗೆ ಎರಡು ವರ್ಷ ಸೆರೆವಾಸ

0
17

2015ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಪಾಟೀದಾರ್ ಮೀಸಲಾತಿ ಹೋರಾಟದ ರೂವಾರಿ ಹಾರ್ದಿಕ್ ಪಟೇಲ್‌ ಅಪರಾಧಿ ಎಂದು ಪರಿಗಣಿಸಿರುವ ವಿಸ್ನಗರ್ ನ್ಯಾಯಾಲಯ ಬುಧವಾರ ಎರಡು ವರ್ಷ ಜೈಲು ಶಿಕ್ಷೆ ನೀಡಿದೆ.

ಮೆಹ್ಸಾನಾ: 2015ರಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಪಾಟೀದಾರ್ ಮೀಸಲಾತಿ ಹೋರಾಟದ ರೂವಾರಿ ಹಾರ್ದಿಕ್ ಪಟೇಲ್‌ ಅಪರಾಧಿ ಎಂದು ಪರಿಗಣಿಸಿರುವ ವಿಸ್ನಗರ್ ನ್ಯಾಯಾಲಯ ಬುಧವಾರ ಎರಡು ವರ್ಷ ಜೈಲು ಶಿಕ್ಷೆ ನೀಡಿದೆ. 

ಕೋರ್ಟ್ ತೀರ್ಪಿನನ್ವಯ ಸರ್ದಾರ್ ಪಟೇಲ್ ಸಂಘಟನೆ ನಾಯಕ ಲಾಲ್ಜಿ ಪಟೇಲ್ ಅವರು ಸಹ ಎರಡು ವರ್ಷ ಕಂಬಿ ಎಣಿಸಬೇಕಿದೆ. 

2015ರಲ್ಲಿ ನಡೆದ ಪಾಟೀದಾರ್ ಆಂದೋಲನದ ಸಂದರ್ಭದಲ್ಲಿ ಗಲಭೆ ಎಬ್ಬಿಸಿ, ಸಾರ್ವಜನಿಕ ಆಸ್ತಿಪಾಸ್ತಿ ನಾಶ, ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಆರೋಪ ಹಾರ್ದಿಕ್ ಮತ್ತು ಅವರ ಸಹಚರರಾದ ಲಾಲ್ಜಿ ಪಟೇಲ್ ಮತ್ತು ಅಂಬಾಲಾಲ್ ಪಟೇಲ್ ಮೇಲಿತ್ತು. ಮೂವರನ್ನು ಅಪರಾಧಿಗಳೆಂದು ಪರಿಗಣಿಸಿರುವ ವಿಸ್ನಗರ್ ಸೆಷನ್ ಕೋರ್ಟ್ ನ್ಯಾಯಾಧೀಶರಾದ ವಿ ಪಿ ಅಗ್ರವಾಲ್ ಎರಡು ವರ್ಷ ಜೈಲುವಾಸದ ಶಿಕ್ಷೆ ಮತ್ತು ತಲಾ 50,000 ದಂಡ ವಿಧಿಸಿದ್ದಾರೆ. 

ಸೂಕ್ತ ಸಾಕ್ಷ್ಯಾಧಾರಗಳಿಲ್ಲದ ಹಿನ್ನೆಲೆಯಲ್ಲಿ ಉಳಿದ 14 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. 

ಜುಲೈ 23, 2015ರಂದು ಪಟೇಲ್ ಸಮುದಾಯ ಮೀಸಲಾತಿ ಹೋರಾಟ ಹಿಂಸಾತ್ಮಕವಾಗಿ ಬದಲಾಗಿತ್ತು. ಈ ಸಂದರ್ಭದಲ್ಲಿ ಕೆಲ ಮಾಧ್ಯಮ ಪ್ರತಿನಿಧಿಗಳ ಮೇಲೆ ಕೂಡ ಹಲ್ಲೆ ನಡೆದಿತ್ತು. ಹಿಂಸಾತ್ಮಕ ಹೋರಾಟದ ಸಂದರ್ಭದಲ್ಲಿ, ಪ್ರತಿಭಟನಾ ನಿರತರು ಒಂದು ಕಾರನ್ನು ಸುಟ್ಟು ಹಾಕಿದ್ದರು ಹಾಗೂ ಸ್ಥಳೀಯ ಬಿಜೆಪಿ ಎಂಎಲ್ಎ ರಿಷಿಕೇಶ್ ಪಟೇಲ್ ಅವರ ಕಚೇರಿಯನ್ನು ಧ್ವಂಸಮಾಡಲಾಗಿತ್ತು. 

ಮೆಹ್ಸಾನಾ ಜಿಲ್ಲೆಯ ವಿಸ್ನಗರದಲ್ಲಿ ಆಂದೋಲನದ ರೂವಾರಿ ಹಾರ್ದಿಕ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿತ್ತು.